

ಹುಬ್ಬಳ್ಳಿ: ಇಲ್ಲಿಯ ಮಡಿವಾಳ ನಗರದ ಶ್ರೀ ರಾಘವೇಂದ್ರ ದೇವಸ್ಥಾನ ಬಳಿಯ ಧೋಬಿ ಘಾಟ್‌ನಿಂದ ಅಶೋಕನಗರ ಹೊರಗೆ ನಡೆಯುತ್ತಿರುವ ಮುಖ್ಯ ರಸ್ತೆ ಕಾಮಗಾರಿಯನ್ನು ಶಾಸಕ ಮಹೇಶ ಟೆಂಗಿನಕಾಯಿ ಅವರು ಭಾನುವಾರ ವೀಕ್ಷಣೆ ಮಾಡಿದರು.
ಕೆಲ ದಿನಗಳ ಹಿಂದೆ ನಗರದ ಪ್ರವಾಸಿ ಮಂದಿರದಲ್ಲಿ ಈ ಕುರಿತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಜತೆ ಸಭೆ ನಡೆಸಿದ್ದ ಶಾಸಕರು, ಗುತ್ತಿಗೆದಾರರಿಗೆ ಗುಣಮಟ್ಟದ ಸಿಸಿ ರಸ್ತೆ ಕಾಮಗಾರಿ ಪ್ರಾರಂಭಿಸಲು ಎಚ್ಚರಿಕೆ ನೀಡಿದ್ದರು. ಇದಾದ ಬಳಿಕ ಖುದ್ದು ಕಾಮಗಾರಿ ಸ್ಥಳ ವೀಕ್ಷಿಸಿದರು. ಪಾಲಿಕೆ ಸದಸ್ಯರಾದ ವೀರಣ್ಣ ಸವಡಿ, ಸಂತೋಷ ಚವ್ಹಾಣ, ಪ್ರಮುಖರಾದದ ಸಿದ್ದು ಮೊಗಲಿ ಶೆಟ್ಟರ್, ರವಿ ನಾಯಕ ಉಪಸ್ಥಿತರಿದ್ದರು.