ಮೇಲ್ಸೇತುವೆ ಕಾಮಗಾರಿ ವೀಕ್ಷಿಸಿದ ಟೆಂಗಿನಕಾಯಿ

h30-mahesh tenginakai
Published on

ಹುಬ್ಬಳ್ಳಿ: ನಗರದಲ್ಲಿ ನಡೆಯುತ್ತಿರುವ ಮೇಲ್ಸೇತುವೆ ಕಾಮಗಾರಿಯನ್ನು ಶಾಸಕ ಮಹೇಶ ಟೆಂಗಿನಕಾಯಿ ಬುಧವಾರ ವೀಕ್ಷಿಸಿ, ಅಧಿಕಾರಿಗಳಿಂದ ಮಾಹಿತಿ ಪಡೆದರು.

ಇಲ್ಲಿಯ ಬಸವ ವನ, ರಾಣಿ ಚನ್ನಮ್ಮ ವೃತ್ತ, ಹಳೆಕೋರ್ಟ್‌ವರೆಗಿನ ಮೇಲ್ಸೇತುವೆ ಕಾಮಗಾರಿ ವೀಕ್ಷಿಸಿ ಮಾತನಾಡಿದ ಶಾಸಕರು, 22 ದಿನದ ಹಿಂದೆ ಕಾಮಗಾರಿ ವೀಕ್ಷಣೆ ಮಾಡಿದ್ದೆ. ಈಗ ಕಾಮಗಾರಿ ವೇಗ ಪಡೆಯುತ್ತಿದೆ. 61 ಗರ್ಡರ್ ಹಾಕಲಾಗಿದೆ. ನಾಲ್ಕು ಸ್ಲಾೃಬ್, ಒಂದು ಪಿಲ್ಲರ್ ಕಾಮಗಾರಿ ಮುಗಿದಿದೆ. ಇನ್ನಷ್ಟು ಕಾಮಗಾರಿ ವೇಗ ಪಡೆದುಕೊಳ್ಳಬೇಕು. ಕಾರ್ಮಿಕರನ್ನು ಹೆಚ್ಚಿಗೆ ನಿಯೋಜಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಕೆಸಿಸಿಐ ಅಧ್ಯಕ್ಷ ರವಿ ಬಳಿಗಾರ, ಕೃಷ್ಣರಾಜ ಕೆಮ್ತೂರ, ಶಿವಮೂರ್ತಿ ಪಾಟೀಲ ಮಾತನಾಡಿದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ಸತೀಶ ನಾಗನೂರ, ಸಹಾಯಕ ಇಂಜಿನಿಯರ್ ರಮೇಶ ನವಲಿ, ಸುದರ್ಶನ ಬಂಡಿ, ಸೆಂಟ್ರಲ್ ಕ್ಷೇತ್ರದ ಬಿಜೆಪಿ ಅಧ್ಯಕ್ಷ ರಾಜು ಕಾಳೆ, ಪ್ರಮುಖರಾದ ರವಿ ನಾಯಕ, ಅಶೋಕ ವಾಲ್ಮೀಕಿ ಅನೇಕರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net