ಕ್ಲೀನ್ ಗ್ರೀನ್ ಸಿಟಿ ಪರಿಕಲ್ಪನೆ ಸಾಕಾರಕ್ಕೆ ಯತ್ನ,ಶಾಸಕ ಮಹೇಶ ಟೆಂಗಿನಕಾಯಿ ಹೇಳಿಕೆ

IMG-20230816-WA0007-1.jpg
Published on

ಹುಬ್ಬಳ್ಳಿ: ಕ್ಲೀನ್ ಆ್ಯಂಡ್ ಗ್ರೀನ್ ಸಿಟಿ ಪರಿಕಲ್ಪನೆ ಸಾಕಾರಗೊಳಿಸುವ ಸಲುವಾಗಿ ಎಲ್ಲ ಇಲಾಖೆಯ ಕಾಮಗಾರಿಗಳ ಪ್ರಗತಿ ಪರಿಶೀಲನೆಯನ್ನು ನಿಯಮಿತವಾಗಿ ಮಾಡಲಾಗುತ್ತಿದ್ದು, ಆದಷ್ಟು ಶ್ರೀ ರಸ್ತೆ ಕೆಲಸ ರ್ಪೂಣಗೊಳಿಸಲಾಗುವುದು ಎಂದು ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ವಾರ್ಡ್ ನಂಬರ್ 39, 41 ಹಾಗೂ 46ರ ವ್ಯಾಪ್ತಿಗೆ ಬರುವ ಕಾಮಗಾರಿಗಳಿಗೆ ಸಂಬಂಧಿಸಿ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ನಡೆಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಕಳೆದ ತಿಂಗಳಷ್ಟೇ ಅಧಿಕಾರಿಗಳ ಸಭೆ ನಡೆಸಿ ಕಾಲಮಿತಿಯಲ್ಲಿ ಕೆಲಸ ಮುಗಿಸಲು ಸೂಚನೆ ನೀಡಲಾಗಿತ್ತು. ಅದರಂತೆ 15 ದಿನಗಳ ನಂತರ ಸಭೆ ಮಾಡಿ ಮತ್ತೆ ಪ್ರಗತಿ ಪರಿಶೀಲಿಸಿದ್ದೇನೆ. ಒಂದಿಷ್ಟು ಸುಧಾರಣೆಯಾಗುತ್ತಿದೆ. ಅಧಿಕಾರಿಗಳು ಕ್ರಿಯಾಶೀಲರಾಗಿದ್ದಾರೆ. ಗಣೇಶ ಚರ್ತುಥಿ ವೇಳೆಗೆ ಬಹುತೇಕ ರಸ್ತೆ ಕಾಮಗಾರಿ ರ್ಪೂತಿಗೊಳಿಸುವುದಾಗಿ ಭರವಸೆ ನೀಡಿದ್ದಾರೆ ಎಂದರು.

ಬಿಲ್ ಬಾಕಿ ಇವೆ: ಬಿಲ್ ಬಾಕಿ ಕಾರಣದಿಂದ ಸುಮಾರು 43 ಕೋಟಿ ರೂ.ನ 23 ಕಿ.ಮೀ. ರಸ್ತೆ ಕಾಮಗಾರಿ ನಿಂತಿದೆ. ಹೊಸ ಸರ್ಕಾರ ಬಂದ ಮೇಲೆ ಹೀಗಾಗಿದೆ. ಈ ಬಗ್ಗೆ ಪತ್ರ ವ್ಯವಹಾರ ಮಾಡಿ ಹಣ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದೇನೆ. ಬಜೆಟ್ ಸಂದರ್ಭದಲ್ಲಿಯೂ ಗಮನ ಸೆಳೆದಿದ್ದೇನೆ. ಸಂಬಂಧಪಟ್ಟ ಮಂತ್ರಿಗಳನ್ನು ಭೇಟಿ ಮಾಡುವೆ ಎಂದು ಹೇಳಿದರು.

ರಸ್ತೆಗಳಿಗೆ ಹೊಸ ರೂಪ: ಅಧ್ಯಾಪಕನಗರ ಶ್ಯಾಂಡಿಲ್ಯಾಶ್ರಮ ರಸ್ತೆ, ಗೋಪನಕೊಪ್ಪ ತಿರುಪತಿ ಬಜಾರ್ ಸೇರಿ ಹಲವು ರಸ್ತೆಗಳ ಪ್ರಗತಿ ಬಗ್ಗೆ ಸಭೆಯಲ್ಲಿ ಪ್ರಸ್ತಾಪವಾಯಿತು. ಮೇಯರ್ ವೀಣಾ ಬರದ್ವಾಡ, ಪಾಲಿಕೆ ಸದಸ್ಯರಾದ ವೀರಣ್ಣ ಸವಡಿ, ಸಂತೋಷ ಚವ್ಹಾಣ, ಸೀಮಾ ಮೊಗಲಿಶೆಟ್ಟರ್ ಅವರು ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಸಭೆ ಗಮನಕ್ಕೆ ತಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net