

ಹುಬ್ಬಳ್ಳಿ : ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿ ಅವರಿಗೆ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ ಅತಿ ಹೆಚ್ಚು ಮತಗಳು ಬರಬೇಕು. ಇದಕ್ಕಾಗಿ ಪಕ್ಷವನ್ನು ಮತ್ತಷ್ಟು ಬಲಿಷ್ಠಗೊಳಿಸಬೇಕು ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.
ಇಲ್ಲಿನ ದೇಶಪಾಂಡೆ ನಗರದ ಬಿಜೆಪಿ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಸೆಂಟ್ರಲ್ ಕ್ಷೇತ್ರದ ಬೂತ್ ಹಾಗೂ ಮಂಡಳದ ಜಿಲ್ಲಾ ಪದಾಧಿಕಾರಿಗಳ ಮತ್ತು ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ವಾರ್ಡ್ ಚಲೋ ಅಭಿಯಾನ, ಬೂತ್ ಸಶಸ್ತೀಕರಣ, ಶಕ್ತಿ ವಂದನ ಅಭಿಯಾನ, ಗೋಡೆ ಬರಹ, ವಿಕಸಿತ ಭಾರತ ಅಭಿಯಾನಗಳನ್ನು ಯಶಸ್ವಿಗೊಳಿಸುವಂತೆ ಕರೆ ನೀಡಿದರು.
ಮೊದಲು ಬೂತ್ ಗಟ್ಟಿ ಗೋಳಿಸಬೇಕು. ಬೂತ್ ಗಟ್ಟಿಯಾದರೆ ಫಲಿತಾಂಶವು ಸಹ ಉತ್ತಮವಾಗಿರುತ್ತದೆ. ಪಕ್ಷದ ಅಭ್ಯರ್ಥಿ ಪ್ರಲ್ಹಾದ ಜೋಶಿ ಅವರನ್ನು ಮೂರು ಲಕ್ಷ ಅಂತರದಿಂದ ಗೆಲ್ಲಿಸಬಹುದು ಎಂದು ಹೇಳಿದರು.
ಗ್ರಾಮ ಚಲೋ ಅಭಿಯಾನದ ವಿಭಾಗ ಪ್ರಭಾರಿ ಜಯತೀರ್ಥ ಕಟ್ಟಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಶಾಸಕರಾದ ಮಹೇಶ ಟೆಂಗಿನಕಾಯಿ ಹಾಗೂ ಎಂ. ಆರ್. ಪಾಟೀಲ ಪ್ರಗತಿ ವಾಹನಕ್ಕೆ ಚಾಲನೆ ನೀಡಿದರು. ಲಿಂಗರಾಜ ಪಾಟೀಲ, ಗೋವಿಂದ ಜೋಶಿ, ಪ್ರಭು ನವಲಗುಂದಮಠ. ಡಾ ಕ್ರಾಂತಿ ಕಿರಣ ಮತ್ತಿತರರು ಉಪಸ್ಥಿತರಿದ್ದರು.
ಮೇಯರ್ ವೀಣಾ ಬರದ್ವಾಡ, ಧಾರವಾಡ ಜಿಲ್ಲಾ ಸಂಚಾಲಕ ಮಾ.ನಾಗರಾಜ, ಕ್ಷೇತ್ರದ ಅಧ್ಯಕ್ಷ ಸಂತೋಷ ಚವ್ಹಾಣ, ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ, ದತ್ತಮೂರ್ತಿ ಕುಲಕರ್ಣಿ, ಮಹೇಂದ್ರ ಕೌತಾಳ, ಮಂಜು ಕಾಟಕರ, ಅಶೋಕ ವಾಲ್ಮೀಕಿ, ರಾಜೇಶ್ವರಿ ಸಾಲಗಟ್ಟಿ, ವಕ್ತಾರ ರವಿ ನಾಯಕ, ಪಾಲಿಗೆ ಸದಸ್ಯರಾದ ರಾಜಣ್ಣ ಕೊರವಿ, ಮಲ್ಲಿಕಾರ್ಜುನ ಗುಂಡೂರ, ರೂಪಾ ಶೆಟ್ಟಿ, ಚಂದ್ರಿಕಾ ಮೇಸ್ತ್ರಿ, ಮೀನಾಕ್ಷಿ ಒಂಟಮುರಿ ಹಾಗೂ ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.