

ಹರಪನಹಳ್ಳಿ: ಮಹಾನ್ ನಾಯಕರನ್ನು ಒಂದೇ ಜಾತಿಗೆ ಸೀಮಿತಗೊಳಿಸಬಾರದು ಎಂದು ಶಾಸಕಿ ಎಂ.ಪಿ.ಲತಾ ಹೇಳಿದರು.
ತಾಲೂಕಿನ ಹಾರಕನಾಳು ಗ್ರಾಮದ ವಾಲ್ಮೆಕಿ ಸಮುದಾಯ ಶನಿವಾರ ಆಯೋಜಿಸಿದ್ದ ಆದಿಕವಿ ಮಹರ್ಷಿ ವಾಲ್ಮೆಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಹರ್ಷಿ ವಾಲ್ಮೆಕಿ, ಬಸವಣ್ಣ, ಕನಕದಾಸರು, ಪುರಂದರದಾಸರು, ಅಂಬೇಡ್ಕರ್ ಸೇರಿದಂತೆ ಇತರ ಮಹನೀಯರ ಕುರಿತು ವಿದ್ಯಾರ್ಥಿಗಳು ಅರಿತುಕೊಳ್ಳಬೇಕು. ರಾಮನ ಚರಿತ್ರೆ ಇಡೀ ಜಗತ್ತಿಗೆ ಪರಿಚಯಿಸಿದ ಕೀರ್ತಿ ಮಹರ್ಷಿ ವಾಲ್ಮೆಕಿ ಅವರಿಗೆ ಸಲ್ಲುತ್ತದೆ. ಸಂವಿಧಾನ ಅಡಿಯಲ್ಲಿ ಎಲ್ಲರೂ ಸಹಬಾಳ್ವೆಯಿಂದ ಜೀವನ ಸಾಗಿಸಬೇಕು ಎಂದರು.
ಇದನ್ನೂ ಓದಿ: ಕಾರು ಡಿಕ್ಕಿ ಹೊಡೆದು ದ್ವಿಚಕ್ರ ವಾಹನ ಸವಾರ ಸಾವು
ಹಾರಕನಾಳು ಗ್ರಾಮ ಪಂಚಾಯಿತಿ ಅಧ್ಯಕ್ಷ ಭಾಗ್ಯ ಕೆ.ಅಶೋಕ ಮಾತನಾಡಿ, ಸರ್ವರಿಗೂ ಸಮಬಾಳು ಸಮಪಾಲು ಎಂಬ ಸಂದೇಶ ಸಾರಿದ ಮಹನೀಯರು ಮಹರ್ಷಿ ವಾಲ್ಮೆಕಿ. ಎಲ್ಲ ಸಮಾಜದವರು ಸೇರಿ ಜಯಂತಿ ಆಚರಿಸಬೇಕಿದೆ ಎಂದು ತಿಳಿಸಿದರು.
ವಾಲ್ಮೆಕಿ ಸಮಾಜದ ತಾಲೂಕು ಅಧ್ಯಕ್ಷ ಕೆ.ಉಚ್ಚೆಂಗೆಪ್ಪ ಮಾತನಾಡಿ, ನಾಯಕರ ಜಯಂತಿ ಆಚರಣೆ ಮಾಡುವುದರಿಂದ ಜನರಿಗೆ ಅರಿವಿನ ಜಾಗೃತಿ ಮತ್ತು ಸಮಾಜದ ಅಂಕು ಡೊಂಕುಗಳನ್ನ ತಿದ್ದಲು ಸಹಕಾರಿಯಾಗಲು ಸಾಧ್ಯ ಎಂದು ಹೇಳಿದರು.
ಸಮುದಾಯದ ಮುಖಂಡ ಮನೋಜ್ ತಳವಾರ, ಬಸವರಾಜಯ್ಯ ಮಾತನಾಡಿದರು. ಹಾರಿಕಾ ಮಂಜುನಾಥ ವಾಲ್ಮೆಕಿ ಮತ್ತು ರಾಮಾಯಣ ಕುರಿತು ಉಪನ್ಯಾಸ ನೀಡಿದರು.
ಕನ್ನಡ ಕೋಗಿಲೆ ಖ್ಯಾತಿ ಮಾಹನ್ಯ ಪಾಟೀಲ ಗಾಯಕಿಯಿಂದ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಕೊಣ್ಣೂರು ಜಾನಪದ ಕಲಾಮೇಳದಿಂದ ಜನಪದ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.
ಸಮುದಾಯದ ಮುಖಂಡರಾದ ಸಣ್ಣ ಹಾಲಪ್ಪ, ಪಕ್ಕೀರಪ್ಪ, ದುರಗದಯ್ಯ, ಬೆಲದ ಶಿವು, ಬಜ್ಜಿ ರಾಜಪ್ಪ, ಶಂಕರ್, ಡಿ.ಜಿ.ಪ್ರಕಾಶ್ ಗೌಡರು, ಶೃತಿ ಪಂಪಾನಾಯ್ಕ, ಚೂರಿ ಬಸವರಾಜ್ ಮೋತಿನಾಯ್ಕ, ಕೃಷ್ಣಾನಾಯ್ಕ, ಇಮಾಮ್ ಸಾಬ್, ಹಾಲೇಶ್ ನಾಯ್ಕ, ಓಮ್ಯಾಪ್ಪ, ಶಿವುನಾಯ್ಕ, ಕೆ.ದುರ್ಗಮ್ಮ ಪ್ರಭು ಮಜ್ಜಿಗೆರೆ ಮಾಂತೇಶ್, ಸ್ವಾಮಿನಾಯ್ಕ, ಹರೀಶ್ ನಾಯ್ಕ, ಬಸವರಾಜ್, ಬೀರಪ್ಪ, ಪೂಜಾರ್ ವೀರಣ್ಣಾ, ಗೋಣಿ ಸ್ವಾಮಿ, ಕೆ.ರೇವಣಪ್ಪ ಹಾವನೂರು ಕರಿಯಪ್ಪ ಇತರರಿದ್ದರು.