ಬಸವೇಶ್ವರ ವೃತ್ತ ಅಲಂಕಾರ ಕಾಮಗಾರಿಗೆ ಭೂಮಿಪೂಜೆ

MB Patil
Published on

ತಿಕೋಟಾ: ಪಟ್ಟಣವು ತಾಲೂಕು ಕೇಂದ್ರವಾಗಿ ಘೋಷಣಿಯಾಗಿದೆ. ಪಟ್ಟಣವನ್ನು ಅಲಂಕರಿಸಲು 2.50 ಕೋಟಿ ರೂ. ಮೊತ್ತದ ಕಾಮಗಾರಿ ಮಂಜೂರು ಮಾಡಿದ್ದೇನೆ ಎಂದು ಬಬಲೇಶ್ವರ ಶಾಸಕ ಎಂ.ಬಿ. ಪಾಟೀಲ ಹೇಳಿದರು.
ತಿಕೋಟಾ ಪಟ್ಟಣದ ಬಸವೇಶ್ವರ ವೃತ್ತದ ಅಭಿವೃದ್ಧಿ ಕಾಮಗಾರಿಗೆ ಶುಕ್ರವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಪಟ್ಟಣದ ಬಸವೇಶ್ವರ ವೃತ್ತವು ಬೆಳಗಾವಿ ಜಿಲ್ಲೆಗೆ ಹಾಗೂ ಮಹಾರಾಷ್ಟ್ರಕ್ಕೆ ಹೋಗುವ ದಾರಿಯಲ್ಲಿರುವ ಪ್ರಮುಖ ವೃತ್ತ. ಇದರ ಮೆರುಗು ಹಚ್ಚಿಸುವ ಹಾಗೂ ಅಲಂಕಾರಗೊಳಿಸಲು ಕಾಮಗಾರಿ ಪ್ರಾರಂಭ ಮಾಡುತ್ತಿದ್ದೇವೆ. ಗುಣಮಟ್ಟದ ಕಾಮಗಾರಿ ಮಾಡಬೇಕೆಂದು ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಈ ಭಾಗವು ಈಗಾಗಲೇ ನೀರಾವರಿಯಿಂದ ಸಮೃದ್ಧವಾಗಿದ್ದು, ಉತ್ತಮ ಬೆಳೆ ತೆಗೆಯಲು ರೈತರು ಉತ್ಸುಕರಾಗಿದ್ದಾರೆ. ಪಟ್ಟಣವು ಸಹ ಸುಂದರವಾಗಿ ಕಾಣಬೇಕು. ಬೆಳಕಿನ ವ್ಯವಸ್ಥೆ ಮಾಡಿದ ನಂತರ ಪಟ್ಟಣವು ಅಂದವಾಗಿ ಕಾಣುತ್ತದೆ ಎಂದರು.
ಜಿಪಂ ಮಾಜಿ ಅಧ್ಯಕ್ಷ ಸೋಮನಾಥ ಬಾಗಲಕೋಟ, ತಿಕೋಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಗೌಡನವರ, ಎಚ್.ಎಂ. ಬಾಗವಾನ್, ಸುನೀಲ ನಾಲಾ, ಜಗದೀಶಗೌಡ ಪಾಟೀಲ, ಗುತ್ತಿಗೆದಾರ ಸದಾಶಿವ ಚಿಕ್ಕರಡ್ಡಿ, ಇಂಜಿನಿಯರ್ ಎಂ.ಎಂ. ಪಾಟೀಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net