

ನಂಜನಗೂಡು: ತಾಲೂಕಿನ ಕಳಲೆ ಗ್ರಾಮದಲ್ಲಿ ಭಾನುವಾರ ಗ್ರಾಮ ಪಂಚಾಯಿತಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸಕ ದರ್ಶನ್ ಧ್ರುವನಾರಾಯಣ ಭೂಮಿಪೂಜೆ ನೆರವೇರಿಸಿದರು.
ತಾಲೂಕಿನಲ್ಲಿ ಕಳಲೆ ಗ್ರಾಮ ಪಂಚಾಯಿತಿ ರಾಜಕೀಯವಾಗಿ ಅನೇಕ ಮುಖಂಡರನ್ನು ಕೊಟ್ಟಿದೆ. ಆದ್ದರಿಂದ ಮುಖ್ಯಮಂತ್ರಿಗಳೇ ಆಸಕ್ತಿ ವಹಿಸಿ ಗ್ರಾಮಕ್ಕೆ 2023ರಲ್ಲಿ ಬಂದಿದ್ದ ಸಂದರ್ಭದಲ್ಲಿ 2.5 ಕೋಟಿ ರೂ. ವೆಚ್ಚದ ಅನುದಾನ ನೀಡಿದ್ದರು. ಇಂದು ಮುಂದುವರೆದು ಸುಸಜ್ಜಿತವಾದ ಗ್ರಾಮ ಪಂಚಾಯಿತಿ ಕಟ್ಟಡವನ್ನು ನಿರ್ಮಿಸಲು 75 ಲಕ್ಷ ರೂ. ಅನುದಾನವನ್ನ್ನು ಮತ್ತೆ ನೀಡಿದ್ದಾರೆ. ಇನ್ನು ಹೆಚ್ಚಿನ ಅನುದಾನವನ್ನು ಗ್ರಾಮದ ಅಭಿವೃದ್ಧಿಗೆ ನೀಡುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇನೆ ಎಂದು ಭರವಸೆ ನೀಡಿದರು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಹೇಶ್ ಮಾತನಾಡಿ, ಇಡೀ ನಂಜನಗೂಡು ತಾಲೂಕಿಗೆ ಗ್ರಾಮ ಪಂಚಾಯಿತಿ ಕಟ್ಟಡವನ್ನು ನಿರ್ಮಿಸಲು ಇಷ್ಟೊಂದು ಅನುದಾನ ಬಿಡುಗಡೆ ಮಾಡಿಲ್ಲ. ಶಾಸಕರು ನುಡಿದಂತೆ ನಡೆದಿದ್ದಾರೆ. ತಾಲೂಕಿನಲ್ಲಿ ಉತ್ತಮವಾದ ಗ್ರಾಮ ಪಂಚಾಯಿತಿ ಕಟ್ಟಡ ನಿರ್ಮಿಸುತ್ತೇವೆ. ಸರ್ಕಾರದ ಗ್ಯಾರಂಟಿ ಯೋಜನೆಗಳು ಸೇರಿದಂತೆ ತಾಲೂಕಿನಲ್ಲಿ ಶಾಸಕರು ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ಗ್ರಾ.ಪಂ ಅಧ್ಯಕ್ಷರಾದ ಲತಾ ಮಹೇಶ್, ಹರೀಶ್, ಗ್ರಾ.ಪಂ. ಮಾಜಿ ಅಧ್ಯಕ್ಷರಾದ ಮಹೇಶ್, ಮಹದೇವು, ನಾಗರಾಜ್, ಶಾಂತಮ್ಮ, ರತ್ನಮ್ಮ , ಪ್ರತಾಪ್ , ಲಕ್ಷ್ಮೀ, ಶಿವಕುಮಾರಿ , ರಾಜಮ್ಮ , ರಾಜೇಶ್ವರಿ, ಶಿವಕುಮಾರ್, ವಿಜಯ್ ಕುಮಾರ್, ಯೋಗೇಶ್ , ಚಂದನ್, ವಿಜಯ್, ಮಹೇಶ್ , ಕಳಲೆ ರಾಜೇಶ್ ಸೇರಿದಂತೆ ಯಜಮಾನರು, ಮುಖಂಡರು ಇದ್ದರು.