

ಚಾಮರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಕೆ.ಹರೀಶ್‌ಗೌಡ ಶುಕ್ರವಾರ ಚಾಲನೆ ನೀಡಿದರು.
ರಸ್ತೆಗಳ ಅಭಿವೃದ್ಧಿ ಹಾಗೂ ಯುಜಿಡಿ ನಿರ್ಮಾಣ ಸೇರಿದಂತೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ನಿರಂತರವಾಗಿ ದುಡಿಯುತ್ತಿರುವ ಶಾಸಕರು, ನಗರಪಾಲಿಕೆಯ ವಾರ್ಡ್ ನಂ.25 ಮತ್ತು 26ರಲ್ಲಿ ಅಂದಾಜು 1.35 ಕೋಟಿ ರೂ.ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದರು.
ವಾರ್ಡ್ ಸಂ.25ರ ಎಂ.ಕೆ.ಡಿ.ಕೆ ರಸ್ತೆ, ಸಾಡೆ ರಸ್ತೆ 10ನೇ ಕ್ರಾಸ್, ಹಮದರ್ದ್ ಕ್ಲಿನಿಕ್ ರಸ್ತೆ, ಅಂಜುಮಾನ್ ಲೈಬ್ರರಿ ರಸ್ತೆ, ಮುಸ್ತಫಾ ಉನಾನಿ ಫಾರ್ಮಸಿ ರಸ್ತೆ, ಸಿಸಿ ರಸ್ತೆ ಅಭಿವೃದ್ಧಿ ಕಾಮಗಾರಿ ಹಾಗೂ ವಾರ್ಡ್ ಸಂ.26ರ ಸಾಡೆ ರಸ್ತೆ ದಕ್ಷಿಣ ಕ್ರಾಸ್, ಕೆ.ಆರ್.ಪಾರ್ಕ್ ಕ್ರಾಸ್ ರಸ್ತೆ, ಸಹಿ ಮಸಜಿದ್ ರಸ್ತೆ, ರೈಲ್ವೆ ಗಲ್ಲಿ, ಸುನ್ನಿಚೌಕ ಶಾಲೆ ಹಿಂಭಾಗ ಹಾಗೂ ಕೆ.ಟಿ.ಸ್ಟ್ರೀಟ್ ಹಿಂಭಾಗದ ರಸ್ತೆಗಳನ್ನು ಸಿಸಿ ರಸ್ತೆಯಾಗಿ ಅಭಿವೃದ್ಧಿ ಮಾಡುವ ಕಾಮಗಾರಿಗೆ ಚಾಲನೆ ನೀಡಲಾಯಿತು.
ದೇವರಾಜ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಯು.ಎಸ್.ರಮೇಶ್ ರಾಯಪ್ಪ, ನಗರ ಪಾಲಿಕೆ ಮಾಜಿ ಸದಸ್ಯ ನಸ್ರುದ್ದೀನ್ ಬಾಬು, ಮುಖಂಡರಾದ ಬಾಲರಾಜ್, ರೆಹಮಾನ್ ತುಲ್ಲಾ ಟಿಪ್ಪು, ಸೈಯದ್ ಮಜೀದ್, ಮುಜು, ಅಜ್ಮಲ್ ಅಜ್ಜು , ಆರೀಫ್, ಸಯ್ಯದ್ ಫಾರೂಕ್, ಅಜ್ಜು, ತಬ್ರೆಜ್ ಇತರರಿದ್ದರು.