ಡಸ್ಟಬಿನ್ ಅಳವಡಿಕೆ ಶಾಸಕ ಚಾಲನೆ

raichur
raichur
Published on

ರಾಯಚೂರು ಬ್ಲಾಕ್‌ಸ್ಪಾಟ್‌ಗಳನ್ನು ಕಡಿಮೆ ಮಾಡಲು ಮತ್ತು ಸ್ವಚ್ಚತೆ ಕಾಪಾಡಲು ನಗರದಾದ್ಯಂತ ಕಸದ ಡಬ್ಬಿ ಇಡುವುದನ್ನು ಸುವ್ಯವಸ್ಥಿತವಾಗಿ ಮಾಡಲಾಗುವುದೆಂದು ಶಾಸಕ ಡಾ.ಎಸ್.ಶಿವರಾಜ ಪಾಟೀಲ್ ಹೇಳಿದರು.

ನಗರದ ಪಾಲಿಕೆ ಆಯಕ್ತರ ಕಚೇರಿಯಲ್ಲಿ ಸೋಮವಾರ 650 ಲೀಟರ್ ಸಾಮರ್ಥ್ಯದ 72 ಕಸದ ಡಸ್ಟಬಿನಗಳನ್ನು ಅಳವಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು, ನಗರವು ಸುಂದರವಾಗಿ ಕಾಣಬೇಕು ಎಂಬುದು ನಮ್ಮ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಮಹಾನಗರ ಪಾಲಿಕೆಯು ನಗರದಲ್ಲಿ ಬ್ಲಾಕ್ ಸ್ಪಾಟ್‌ಗಳನ್ನು ಕಡಿಮೆ ಮಾಡಲು ಮತ್ತು ಸ್ವಚ್ಚತೆ ಕಾಪಾಡಲು ನಗರದಾದ್ಯಂತ ಕಸದ ಡಬ್ಬಿ ಇಡಲಾಗುತ್ತಿದೆ ಎಂದರು.

ಖಾಸಗಿಯವರ ಸಹಭಾಗೀತ್ವದಲ್ಲಿ ಶಿಲ್ಪಾ ಮೆಡಿಕೇರ್ ಲಿಮಿಟೆಡ್ ಮತ್ತು ಶಿಲ್ಪಾ ಫೌಂಡೇಶನ್‌ದಿಂದ 10 ಲಕ್ಷ ರೂ. ಮತ್ತು ಐಎಂಎ ಅವರು 10 ಲಕ್ಷ ರೂಪಾಯಿ ಸ್ವಚ್ಛ ನಗರಕ್ಕಾಗಿ ದೇಣಿಗೆ ನೀಡಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು.

ಪಾಲಿಕೆಯ ಸದಸ್ಯ ಜಯಣ್ಣ ಮಾತನಾಡಿ, ಸಾರ್ವಜನಿಕರ ಸಹಮತ ಮತ್ತು ಸಹಕಾರವಿಲ್ಲದೆ ಯಾವ ಯೋಜನೆಯು ಯಶಸ್ವಿಯಾಗಲು ಸಾಧ್ಯವಿಲ್ಲ. ಹಾಗಾಗಿ ಈ ಕಾರ್ಯಕ್ರಮಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದರು. ಈ ಸಂದರ್ಭದಲ್ಲಿ ಪಾಲಿಕೆ ಅಧ್ಯಕ್ಷೆ ನರಸಮ್ಮ ನರಸಿಂಹಲು ಮಾಡಿಗಿರಿ, ಆಯುಕ್ತ ಜುಬಿನ್ ಮೊಹಪಾತ್ರ, ಪಾಲಿಕೆ ಸದಸ್ಯರಾದ ಜಿಂದಪ್ಪ, ಶಶಿರಾಜ ಎನ್.ಕೆ. ನಾಗರಾಜ, ಶಿಲ್ಪಾ ಫೌಂಡೇಶನ್ನಿನ ವ್ಯವಸ್ಥಾಪಕ ವಿಷ್ಣುಕಾಂತ ಸೇರಿ ಅನೇಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net