ಮಳೆಹಾನಿ ಸಂತ್ರಸ್ತರಿಗೆ ಸರ್ಕಾರ ನೆರವು ನೀಡಲಿ: ಶಾಸಕ ವೇದವ್ಯಾಸ ಕಾಮತ್ ಆಗ್ರಹ

mng-17june-mla kamath
Published on


ಮಂಗಳೂರು : ನಗರದಲ್ಲಿ ಇತ್ತೀಚಿಗೆ ಸುರಿದ ಭಾರೀ ಮಳೆಗೆ ಕದ್ರಿ ಶಿವಭಾಗ್‌ನ ಮುಖ್ಯ ರಸ್ತೆಯ ಸುಂದರಿ ಅಪಾರ್ಟ್‌ಮೆಂಟ್
ಹಿಂಬದಿಯ ಬೃಹತ್ ತಡೆಗೋಡೆ ಕುಸಿದು ಅಲ್ಲಿನ ಫ್ಲಾೃಟ್ ಗಳಿಗೆ ತೀವ್ರ ಹಾನಿಯಾಗಿದ್ದು ಶಾಸಕ ವೇದವ್ಯಾಸ ಕಾಮತ್ ಭೇಟಿ ನೀಡಿ ಪರಿಶೀಲಿಸಿದರು.
ಮಣ್ಣು ಕುಸಿತದಿಂದ ಅಲ್ಲಿನ ಮರಗಳೂ ಸಹ ಅಪಾಯಕಾರಿ ಸ್ಥಿತಿಯಲ್ಲಿದ್ದು ತಕ್ಷಣ ಅವುಗಳನ್ನು ತೆರವುಗೊಳಿಸುವಂತೆ ಶಾಸಕರು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇಂತಹ ಪ್ರಾಕೃತಿಕ ವಿಕೋಪದಿಂದ ಸಾರ್ವಜನಿಕರ ಆಸ್ತಿಪಾಸ್ತಿಗಳಿಗೆ ಹಾನಿಯಾದಾಗ ಹಿಂದಿನ ಬಿಜೆಪಿ ಸರ್ಕಾರ ದ ಅವಧಿಯಲ್ಲಿ ಗರಿಷ್ಠ ಲಕ್ಷ ರೂ.ಪರಿಹಾರ ನೀಡುತ್ತಿತ್ತು. ಈಗ ಕಾಂಗ್ರೆಸ್ ಸರ್ಕಾರ ಎಲ್ಲ ಪರಿಹಾರ ಧನಕ್ಕೂ ಕತ್ತರಿ ಹಾಕಿರುವುದರಿಂದ ಜನತೆ ತೀವ್ರ ಸಮಸ್ಯೆ ಅನುಭವಿಸುವಂತಾಗಿದೆ. ಇನ್ನಾದರೂ ರಾಜ್ಯ ಸರ್ಕಾರ ಗಮನ ಹರಿಸಿ ಸಂತ್ರಸ್ತರಿಗೆ ನೆರವಾಗಬೇಕೆಂದು ಶಾಸಕರು ಆಗ್ರಹಿಸಿದರು.
ಮಾಜಿ ಕಾರ್ಪೋರೇಟರ್ ಕಾವ್ಯ ನಟರಾಜ್ ಆಳ್ವ, ಬಿಜೆಪಿ ಪ್ರಮುಖರಾದ ನವೀನ್ ಶೆಣೈ, ಪದ್ಮನಾಭ ನಾಯಕ್, ಯೋಗೀಶ್ ಶೆಣೈ, ಕಿರಣ್ ರೈ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net