

ಮಂಗಳೂರು : ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅವರ ದೈಹಿಕತೆ ಬಗ್ಗೆ ತೃಣಮೂಲ ಕಾಂಗ್ರೆಸ್ ಸಂಸದ ಕಲ್ಯಾಣ್ ಬ್ಯಾನರ್ಜಿ
ಅಪಹಾಸ್ಯ ಮಾಡಿರುವುದು ಖಂಡನೀಯ .ಕಾಂಗ್ರೆಸ್ ನೇತ್ರತ್ವದ ಐಎನ್‌ಡಿಐಎ ಬಣ ದೇಶದ ಕ್ಷಮೆ ಯಾಚಿಸಬೇಕು ಎಂದು ಶಾಸಕ ವೇದವ್ಯಾಸ ಕಾಮತ್ ಆಗ್ರಹಿಸಿದ್ದಾರೆ.
ಅಗೌರವ ತೋರಿದ ತೃಣಮೂಲ ಕಾಂಗ್ರೆಸ್ ಸಂಸದರ ಅನಾಗರಿಕ ವರ್ತನೆಯನ್ನು ಖಂಡಿಸುವ ಬದಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ಫೋನ್ ನಲ್ಲಿ ಚಿತ್ರೀಕರಣ ಮಾಡಿ ಇನ್ನಷ್ಟು ಹುರಿದುಂಬಿಸಿದ್ದು ಅವರ ಪ್ರಬುದ್ಧತೆಯ ಮಟ್ಟಕ್ಕೆ ಸಾಕ್ಷಿಯಾಗಿದೆ. ಕಾಂಗ್ರೆಸ್‌ನ ಮಾನಸಿಕ ಸ್ಥಿತಿಯೇ ದೇಶದಲ್ಲಿ ತಳಮಟ್ಟದಿಂದ ಮೇಲೆ ಬಂದವರನ್ನು ಅವಮಾನಿಸುವುದಾಗಿದೆ. ಅದನ್ನೇ ಅದರ ಮಿತ್ರಪಕ್ಷಗಳು ಮುಂದುವರಿಸಿವೆ ಎಂದು ಶಾಸಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.