ಶಿಕ್ಷಣ ಇಲಾಖೆಯ ಆದೇಶ ಹಿಂಪಡೆಯಲು ಶಾಸಕ ಕಾಮತ್ ಆಗ್ರಹ

allwyn_130820_kamath
Published on



ಮಂಗಳೂರು : ಶಿಕ್ಷಣ ಇಲಾಖೆ ಹೊರಡಿಸಿರುವ ಸುತ್ತೋಲೆಯ ಪ್ರಕಾರ ಶಾಲಾ ಮೈದಾನಗಳಲ್ಲಿ ಇಷ್ಟು ವರ್ಷಗಳಿಂದ ಆಚರಿಸಿಕೊಂಡು ಬಂದ ಗಣೇಶೋತ್ಸವ, ಅಷ್ಟಮಿ, ಸರಸ್ವತಿ ಪೂಜೆ ಮುಂತಾದ ಹಬ್ಬಗಳಿಗೆ ಅವಕಾಶ ನಿರಾಕರಣೆ ಮಾಡಲಾಗಿದೆ. ಹಿಂದು ಸಮಾಜವನ್ನು ಕೆಣಕುವ ದುರುದ್ದೇಶದಿಂದ ರಾಜ್ಯದ ಕಾಂಗ್ರೆಸ್ ಸರ್ಕಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಹಿಂದಿನಿಂದ ನಡೆದುಕೊಂಡ ಬಂದ ಸಂಪ್ರದಾಯಕ್ಕೆ ತಡೆ ಒಡ್ಡಲು ಶಿಕ್ಷಣ ಇಲಾಖೆಯ ಮೂಲಕ ಯತ್ನಿಸಿರುವುದು ಅಕ್ಷಮ್ಯ ಎಂದು ಶಾಸಕ ಡಿ.ವೇದವ್ಯಾಸ ಕಾಮತ್ ಹೇಳಿದ್ದಾರೆ.
ಜಿಲ್ಲೆಯ ಹಲವು ಶಿಕ್ಷಣ ಸಂಸ್ಥೆಗಳಿಗೆ ಹಿಂದು ಸಮಾಜ ದೇವಸ್ಥಾನಗಳ ಜಾಗವನ್ನು ಮಾತ್ರವಲ್ಲದೇ ತಮ್ಮ ವೈಯಕ್ತಿಕ ಜಾಗವನ್ನೂ ಸಹ ದಾನ ಮಾಡಿರುವ ಉದಾಹರಣೆ ಇದೆ. ಅಂತಹ ಉದಾತ್ತ ಚಿಂತನೆಯ ಧರ್ಮದ ಸಂಸ್ಕೃತಿ ಬಗ್ಗೆ ಜಿಹಾದಿ ಮಾನಸಿಕತೆಯ ಕಾಂಗ್ರೆಸ್ಸಿಗೆ
ಅರ್ಥವಾಗುವುದಾದರೂ ಹೇಗೆ? ಶಾಲಾ-ಕಾಲೇಜುಗಳಲ್ಲಿ ಧಾರ್ಮಿಕತೆಗೆ ಅವಕಾಶ ಬೇಡ ಎನ್ನುವ ಇದೇ ಕಾಂಗ್ರೆಸ್ ಹಿಜಾಬ್ಗೆ ಬೆಂಬಲ ಕೊಡುವ ಮೂಲಕ ಇಬ್ಬಗೆ ನೀತಿ ಅನುಸರಿಸುತ್ತದೆ. ದುರುದ್ದೇಶಪೂರಿತವಾದ ಶಿಕ್ಷಣ ಇಲಾಖೆಯ ಈ ಆದೇಶವನ್ನು ತಕ್ಷಣ ಹಿಂಪಡೆಯಬೇಕು. ಹಿಂದೂ ಸಮಾಜದ ಆಕ್ರೋಶದ ಕಟ್ಟೆಯೊಡೆದರೆ ಅದಕ್ಕೆ ಕಾಂಗ್ರೆಸ್ ಸರ್ಕಾರವೇ ನೇರ ಹೊಣೆ ಎಂದು ಶಾಸಕ ಕಾಮತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
.....................

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net