ಕಾಂಗ್ರೆಸ್ ಸರ್ಕಾರದಿಂದ ಹಿಂದೂ ನಾಯಕರನ್ನು ದಮನಿಸುವ ಕಾರ್ಯ ಶಾಸಕ ವೇದವ್ಯಾಸ ಕಾಮತ್ ಆಕ್ರೋಶ

d-vedavyasa-kamath-72325
Published on


ಮಂಗಳೂರು : ರಾಜ್ಯ ಸರ್ಕಾರ ಪೊಲೀಸ್ ಇಲಾಖೆಯನ್ನು ಬಳಸಿಕೊಂಡು ಹಿಂದೂ ಸಂಘಟನೆಯ ನಾಯಕರನ್ನು ದಮನಿಸುವ ಕೆಲಸ ಮಾಡುತ್ತಿದೆ. ಹಿಂದು ಸಂಘಟನೆಗಳ ವಿರುದ್ಧ ವಿನಾಕಾರಣ ಕೇಸು ದಾಖಲಿಸಿ ಕಿರುಕುಳ ನೀಡಲಾಗುತ್ತಿದೆ ಎಂದು ಶಾಸಕ ವೇದವ್ಯಾಸ ಕಾಮತ್ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ವಿಶ್ವ ಹಿಂದು ಪರಿಷತ್ ಮುಖಂಡ ಶರಣ್ ಪಂಪ್‌ವೆಲ್ ಹಾಗೂ ಬಜರಂಗದಳ ಮುಖಂಡ ದಿನೇಶ್ ಮೆಂಡನ್ ವಿರುದ್ಧ ಸ್ವಯಂ ಪ್ರೇರಿತರಾಗಿ ಕೇಸು ದಾಖಲಿಸಿದ ಪೊಲೀಸರಿಗೆ ಉಡುಪಿಯ ವೈದ್ಯಕೀಯ ವಿಧ್ಯಾರ್ಥಿನಿಯ ವಿಚಾರದಲ್ಲಿ ಇಂತಹ ಧೈರ್ಯ ಯಾಕಿರಲಿಲ್ಲ. ಆಗ ಪೊಲೀಸರನ್ನು ಕಟ್ಟಿ ಹಾಕಿದ್ದ ಕೈ ಯಾವುದು ಎಂದು ಕಾಮತ್ ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಆಡಳಿತಕ್ಕೆ ಬಂದ ಬಳಿಕ ಹಿಂದು ಸಂಘಟನೆಗಳನ್ನು ಗುರಿಯಾಗಿಸಿ ಪೊಲೀಸ್ ಬಲ ಪ್ರಯೋಗ ಮಾಡಲಾಗುತ್ತಿದೆ. ಸಂವಿಧಾನ ಬದ್ಧವಾಗಿ ಆಡಳಿತ ನಡೆಸಬೇಕಿದ್ದ ಸರ್ಕಾೃ ನಾಡಿನಲ್ಲಿ ದ್ವೇಷ ಬಿತ್ತುವ ಕೆಲಸ ಮಾಡುತ್ತಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net