ಮೌಲ್ಯಯುತ ಜೀವನ ಕಟ್ಟಿಕೊಳ್ಳಿ

15 bvp news
Published on

ಬಸವಾಪಟ್ಟಣ: ಕೇವಲ ಪರೀಕ್ಷೆಯ ಅಂಕಗಳಿಗಾಗಿ ಓದದೇ ಮೌಲ್ಯಯುತ ಜೀವನ ಕಟ್ಟಿಕೊಳ್ಳುವ ಗುರಿ ಇಟ್ಟುಕೊಳ್ಳಬೇಕು ಎಂದು ಮಾಯಕೊಂಡ ಕ್ಷೇತ್ರದ ಶಾಸಕ ಕೆ.ಎಸ್. ಬಸವಂತಪ್ಪ ಹೇಳಿದರು.

ಇಲ್ಲಿನ ಸರ್ಕಾರಿ ಜನತಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ 2024-25 ನೇ ಸಾಲಿನ ಸಾಂಸ್ಕೃತಿಕ, ಕ್ರೀಡಾ, ಎನ್ನೆಸ್ಸೆಸ್, ಯುವ ರೆಡ್ ಕ್ರಾಸ್, ರೋವರ್ಸ್ ಮತ್ತು ರೇಂಜರ್ಸ್ ಚಟುವಟಿಕೆಗಳ ಸಮಾರೋಪ ಸಮಾರಂಭ, ಬಸವ ಕಿರಣ ವಾರ್ಷಿಕ ಸಂಚಿಕೆ -2ರ ಬಿಡುಗಡೆ ಮತ್ತು ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಎಷ್ಟು ಸಂಪತ್ತು, ಹಣ, ಆಸ್ತಿ ಗಳಿಸಿದನೆಂಬುದು ಮುಖ್ಯವಲ್ಲ, ಯಾವ ರೀತಿ ಮೌಲ್ಯಯುತ ಜೀವನವನ್ನು ನಡೆಸುತ್ತೇವೆ ಎಂಬುದು ಮುಖ್ಯ. ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಜೀವಿಸಿದವರನ್ನು ಸಮಾಜ ಎಂದು ಮರೆಯುವುದಿಲ್ಲ. ವಿದ್ಯಾರ್ಥಿಗಳು ಇಂತಹ ಗುಣಗಳನ್ನು ಮೈಗೂಡಿಸಿಕೊಂಡು ದೇಶದ ಸತ್ಪ್ರಜೆಯಾಗಬೇಕು ಎಂದರು.

ನಿವೃತ್ತ ಪ್ರಾಚಾರ್ಯ ಡಾ.ಕೆ.ಆರ್. ಭೋಗೇಶ್ವರಪ್ಪ ಮಾತನಾಡಿ, ಗ್ರಾಮೀಣ ಪ್ರತಿಭೆಗಳು ಹೊರಹೊಮ್ಮಬೇಕು. ಈ ಪ್ರತಿಭೆಯನ್ನು ಹೊರಹಾಕಲು ಶಿಕ್ಷಣ ಶಕ್ತಿಯಾಗುತ್ತದೆ. ಮಾತು ಸಾಧನೆಯಾಗಬಾರದು, ಸಾಧನೆ ಮಾತಾಗಬೇಕು. ವಿದ್ಯಾರ್ಥಿಗಳು ಗುರಿ ಇಟ್ಟುಕೊಂಡು ಗುರುಗಳ ಮಾರ್ಗದರ್ಶನದಲ್ಲಿ ನಡೆದಾಗ ಮಾತ್ರ ಯಶಸ್ಸನ್ನು ಕಾಣಲು ಸಾಧ್ಯ ಎಂದು ಹೇಳಿದರು.

ಪ್ರಾಚಾರ್ಯ ಡಾ.ಟಿ. ಮಂಜಣ್ಣ ಮಾತನಾಡಿ, ವಿದ್ಯಾರ್ಥಿಗಳಿಗೆ ವಿಧೇಯತೆ, ಶಿಸ್ತು, ಸಮಯ ಪ್ರಜ್ಞೆ ಅತಿಮುಖ್ಯ. ಈ ಮೂರನ್ನು ಅಳವಡಿಸಿಕೊಂಡವರ ಬದುಕು ಸಾರ್ಥಕ ಎಂದರು.

ಡಾ.ಎಂ.ಆರ್. ಲೋಕೇಶ್ ಮಾತನಾಡಿದರು. ಚನ್ನಗಿರಿ ತಹಸೀಲ್ದಾರ್ ನಾಗರಾಜ್, ಗ್ರಾಪಂ ಅಧ್ಯಕ್ಷ ಡಿ.ಆರ್. ಹಾಲೇಶ್, ಉಪಾಧ್ಯಕ್ಷೆ ಕುಸುಮಾ ಬಸವರಾಜಪ್ಪ, ಗ್ರಾಪಂ ಸದಸ್ಯರಾದ ಡಿ.ಸಿ. ಹಿದಾಯತ್, ಜಹೀರ್ ಪಟೇಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ. ನಾಗರಾಜ್, ಸಾಂಸ್ಕೃತಿಕ ಸಂಚಾಲಕ ಎಂ.ಡಿ. ರಾಘವೇಂದ್ರ, ಅಧೀಕ್ಷಕರಾದ ಜೆ.ಎಸ್. ಪ್ರಶಾಂತ್​ಕುಮಾರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net