ವಿದ್ಯಾರ್ಥಿಗಳಲ್ಲಿ ಬದ್ಧತೆ, ಏಕಾಗ್ರತೆ ಮುಖ್ಯ

Untitled design (4)
ಹಗರಿಬೊಮ್ಮನಹಳ್ಳಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳ ಕಾರ್ಯಾಗಾರವನ್ನು ಶಾಸಕ ಕೆ.ನೇಮಿರಾಜನಾಯ್ಕ ಉದ್ಘಾಟಿಸಿದರು. ಚಾಣಕ್ಯ ಕರಿಯರ್ ಅಕಾಡೆಮಿ ನಿರ್ದೇಶಕ ಪ್ರದೀಪ್ ಗುಡ್ಡದ್, ಪ್ರಾಚಾರ್ಯ ಡಾ.ಕೆ.ವೆಂಕಟೇಶ್, ವೈ.ಮಲ್ಲಿಕಾರ್ಜುನ ಇದ್ದರು.
Published on

ಹಗರಿಬೊಮ್ಮನಹಳ್ಳಿ: ಸ್ಪರ್ಧಾತ್ಮಕ ಜಗತ್ತಿನಲ್ಲಿ ಸಾಧಿಸಲು ಪ್ರತಿಭೆ ಮತ್ತು ಪರಿಶ್ರಮ ಅತ್ಯಗತ್ಯ ಎಂದು ಶಾಸಕ ಕೆ.ನೇಮಿರಾಜನಾಯ್ಕ ಹೇಳಿದರು.

ಪಟ್ಟಣದ ಗಂಗಾವತಿ ವೆಂಕಟರಮಣ ಶ್ರೇಷ್ಟಿ ಪದ್ಮಾವತೆಮ್ಮ ಪಂಚರತ್ನಮ್ಮ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ಥಾನೀಕರಣ ಕೋಶ ಮತ್ತು ಧಾರವಾಡದ ಚಾಣಕ್ಯ ಕರಿಯರ್ ಅಕಾಡೆಮಿ ಸಹಯೋಗದಲ್ಲಿ ಏರ್ಪಡಿಸಿದ್ದ ಒಂದು ದಿನದ ಸ್ಪರ್ಧಾತ್ಮಕ ಪರೀಕ್ಷೆಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಶುಕ್ರವಾರ ಮಾತನಾಡಿದರು.

ಭಾರತದಲ್ಲಿ ಯುವಸಮುದಾಯದಿಂದ ಬಲಾಢ್ಯ

ಭಾರತದಲ್ಲಿ ಯುವಸಮುದಾಯದಿಂದ ಬಲಾಢ್ಯವಾಗಿದೆ. ವಿದ್ಯಾರ್ಥಿಗಳಲ್ಲಿ ಬದ್ಧತೆ ಮತ್ತು ಏಕಾಗ್ರತೆ ಎರಡು ಮುಖ್ಯ ಗುಣಗಳಿರಬೇಕು. ನಿಗದಿತ ಗುರಿ ಸಾಧನೆಗೆ ಪೂರಕವಾಗಿ ಪೂರ್ವನಿಯೋಜಿತ ದಿನಚರಿಯನ್ನು ಪಾಲಿಸಬೇಕು. ಸಮಯಕ್ಕೆ ಆದ್ಯತೆ ನೀಡಿದಾಗ ಗುರಿಸಾಧನೆ ಸಾಧ್ಯ ಎಂದರು.
ಇದನ್ನೂ ಓದಿ: Shivanand Patil On APMC, Textile & Sugar Industries | ಸರ್ಕಾರಕ್ಕೆ ಆದಾಯ ಕಡಿಮೆಯಾದ್ರೂ ಜನರಿಗೆ ಕೈತುಂಬ ಕೆಲಸ ಕೊಡುವ ಇಲಾಖೆಗಳಿವು! | VIJAYAVANI

ಚಾಣಕ್ಯ ಕರಿಯರ್ ಅಕಾಡೆಮಿ ನಿರ್ದೇಶಕ ಪ್ರದೀಪ್ ಗುಡ್ಡದ ಮಾತನಾಡಿ, ಸರ್ಕಾರಿ ಹುದ್ದೆಗಳನ್ನು ಪಡೆಯಲು ಸ್ಪರ್ಧಾತ್ಮಕ ಪರೀಕ್ಷೆಗಳು ಎದುರಿಸುವುದು ಅನಿವಾರ್ಯ ಎಂದರು. ಪ್ರಾಚಾರ್ಯ ಡಾ.ಕೆ.ವೆಂಕಟೇಶ್, ಸ್ಥಾನೀಕರಣ ಕೋಶದ ಸಂಚಾಲಕ ಬಡಿಗೇರ ವೀರೇಶ, ಪ್ರಮುಖರಾದ ಡಾ.ಹರಾಳು ಬುಳ್ಳಪ್ಪ, ಪ್ರಶಾಂತ್ ಮೋರೆ, ವಿ.ಎಂ.ಗವಿಸಿದ್ದೇಶ್, ವೈ.ಮಲ್ಲಿಕಾರ್ಜುನ, ಅವಿನಾಶ್ ಪೂಜಾರ್, ಅಕ್ಕಿ ಬಸವರಾಜ್, ಉಪನ್ಯಾಸಕರಾದ ಪ್ರವೀಣ್, ಟಿ.ಜಗದೀಶ್, ಡಾ.ಗುರುಪ್ರಸಾದ್ ಹವಾಲ್ದಾರ್ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net