

ಚಾಮರಾಜ ವಿಧಾನಸಭಾ ಕ್ಷೇತ್ರವನ್ನು ರಾಜ್ಯದಲ್ಲೇ ಮಾದರಿ ಕ್ಷೇತ್ರವನ್ನಾಗಿ ಮಾಡಲು ಪಣತೊಟ್ಟಿರುವ ಶಾಸಕ ಕೆ.ಹರೀಶ್‌ಗೌಡ ಕ್ಷೇತ್ರದಲ್ಲಿ ನಿರಂತರವಾಗಿ ನಾನಾ ಅಭಿವೃದ್ಧಿ ಕಾಮಗಾರಿ ಕೆಲಸ ನಡೆಸುತ್ತಿದ್ದು, ಸೋಮವಾರವೂ ಕ್ಷೇತ್ರದ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.
ರಸ್ತೆಗಳ ಅಭಿವೃದ್ಧಿ ಹಾಗೂ ಯುಜಿಡಿ ನಿರ್ಮಾಣ ಸೇರಿದಂತೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ನಿರಂತರವಾಗಿ ದುಡಿಯುತ್ತಿರುವ ಶಾಸಕರು, ಸೋಮವಾರ 5 ಕೋಟಿ ರೂ. ವೆಚ್ಚದಲ್ಲಿ ವಾರ್ಡ್ ಸಂಖ್ಯೆ 1,2,4 ಹಾಗೂ 5 ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿದರು.
ವಾರ್ಡ್ ಸಂಖ್ಯೆ 1ರ ವ್ಯಾಪ್ತಿಯ ಹೆಬ್ಬಾಳು 1ನೇ ಹಂತದ ಲಕ್ಷ್ಮೀಕಾಂತ ನಗರದ ಎಲ್ಐಜಿ, ಎಂಐಜಿ ಮನೆಗಳ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಹಾಗೂ ಚಿತ್ರ ರೆಸಿಡೆನ್ಸಿ ಅಕ್ಕ ಪಕ್ಕದ ರಸ್ತೆ ಅಭಿವೃದ್ಧಿ ಕಾಮಗಾರಿ, ವಾರ್ಡ್ 2ರ ವ್ಯಾಪ್ತಿಯ ಹೆಬ್ಬಾಳು ಸಿದ್ದಪ್ಪಾಜಿ ದೇವಸ್ಥಾನದ ಮುಖ್ಯರಸ್ತೆ ಮತ್ತು ಅಡ್ಡರಸ್ತೆ ಅಭಿವೃದ್ಧಿ, ಹೆಬ್ಬಾಳು 1ನೇ ಹಂತದ 5ನೇ ಕ್ರಾಸ್‌ನಲ್ಲಿ ಚರಂಡಿ ನಿರ್ಮಾಣ ಹಾಗೂ 6ನೇ ಅಡ್ಡರಸ್ತೆಯಲ್ಲಿ ಕಾಂಕ್ರೀಟ್ ರಸ್ತೆ ಮತ್ತು 10ನೇ ಕ್ರಾಸ್‌ರಸ್ತೆ ಅಭಿವೃದ್ಧಿ ಕಾಮಗಾರಿ, ವಾರ್ಡ್ ಸಂಖ್ಯೆ 4 ವ್ಯಾಪ್ತಿಯ ರಾಯಲ್ ಇನ್ ಹೋಟೆಲ್ ಮುಂಭಾಗದ ರಸ್ತೆ, ಲೋಕನಾಯಕನಗರದ ಸಂಜೀವಿನಿ ಸರ್ಕಲ್‌ನಿಂದ ಅಕ್ಷಯ ಪ್ಯಾಲೇಸ್ ವರೆಗೂ ಮುಖ್ಯರಸ್ತೆ ಹಾಗೂ ಅಡ್ಡರಸ್ತೆಗಳು ಮತ್ತು ಚರಂಡಿ ನಿರ್ಮಾಣ, ಮುಡಾ ಮಾರ್ಕೆಟ್ ಅಕ್ಕ-ಪಕ್ಕದ ರಸ್ತೆಗಳ ಅಭಿವೃದ್ಧಿ, ಆಂಜನೇಯ ದೇವಸ್ಥಾನದ ಬಳಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿ, ವಾರ್ಡ್ 5ರ ಕುಂಬಾರಕೊಪ್ಪಲಿನ ಇಂದಿರಾ ಕ್ಯಾಂಟೀನ್ ರಸ್ತೆ ಮತ್ತು ಕಾವೇರಿ ಬಡಾವಣೆ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಅಡ್ಡರಸ್ತೆಗಳು, ಕುಂಬಾರಕೊಪ್ಪಲು ಮೇಲ್ಭಾಗದ ಬಸ್ ನಿಲ್ದಾಣಕ್ಕೆ ಹೊಂದಿಕೊಂಡಿರುವ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಮುಖಂಡರಾದ ಪೈಲ್ವಾನ್ ಶ್ರೀನಿವಾಸ್, ನಾಗಣ್ಣ, ಅಪ್ಪಾಜಿ ಗೌಡ, ಕೇಬಲ್ ಮಹೇಶ್, ಸುಪ್ರೀಂ ಮಂಜು, ಶ್ರೀನಿವಾಸ್, ಅರವಿಂದ್, ವೆಂಕಟೇಶ್, ಜಯರಾಮೇಗೌಡ, ಡೆಲ್ಲಿ ರವಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರವಿ, ಶ್ರೀಧರ್, ಲೋಕೇಶ್, ಕೇಬಲ್ ಪುಟ್ಟರಾಜು, ಮಹದೇವಣ್ಣ, ಮೂರ್ತಿ, ಜಗದೀಶ್, ರಾಮಚಂದ್ರು, ರಮೇಶ್, ಮಹೇಶ್ ಮರಿಯಪ್ಪ, ಚಂದ್ರು ಇತರರಿದ್ದರು.