

ನಿಪ್ಪಾಣಿ: ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ಶಾಸಕಿ ಶಶಿಕಲಾ ಜೊಲ್ಲೆ ಅವರ ಕೊಡುಗೆ ಅಪಾರ. ಅವರ ಪ್ರಯತ್ನದಿಂದ ನಮ್ಮೂರಲ್ಲಿ ಅಂಗನವಾಡಿ ಕೇಂದ್ರದ ಹೊಸ ಕಟ್ಟಡ ನಿರ್ಮಾಣಕ್ಕೆ ಅನುದಾನ ಮಂಜೂರಾಗಿದೆ ಎಂದು ಗ್ರಾಪಂ ಅಧ್ಯಕ್ಷೆ ಆಶಾತಾಯಿ ಪೋತದಾರ ಹೇಳಿದರು.
ತಾಲೂಕಿನ ಹಂಚಿನಾಳ ಗ್ರಾಮದಲ್ಲಿ ಶನಿವಾರ ನರೇಗಾ ಯೋಜನೆಯಡಿ 20 ಲಕ್ಷ ರೂ. ವೆಚ್ಚದ ಅಂಗನವಾಡಿ ಕೇಂದ್ರದ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಶ್ರೀ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆ ಸಂಚಾಲಕ ರಮೇಶ ಪಾಟೀಲ, ಶ್ರೀಕಾಂತ ಕಣಗಲೆ, ಸಿಡಿಪಿಒ ಸುಪ್ರಿಯಾ ಜಡಗೆ, ಬಬನ ಹವಾಲ್ದಾರ್, ಎಂ.ವೈ. ಹವಾಲ್ದಾರ್, ಆರ್.ಎಲ್.ಚೌಗುಲೆ, ಸಾಗರ ಚೌಗುಲೆ, ಸಿದ್ಧು ವಂದೂರೆ, ಬಾಳಾಸಾಹೇಬ ಪಾಟೀಲ, ಅನಿಲ ಹೆಗಡೆ, ಕೇಶವ ಪಾಟೀಲ, ಎನ್.ಡಿ.ವಂದೂರೆ, ಭೀಮಗೊಂಡ ಪಾಟೀಲ, ಶ್ರೀಕಾಂತ ಚೌಗುಲೆ, ಮಾರುತಿ ಚೌಗುಲೆ, ಸವಿತಾ ಪಾಟೀಲ, ರೇಖಾ ಚೌಗುಲೆ ಇತರರಿದ್ದರು.