ಇಂಟರ್‌ಲಾಕ್ ಟೈಲ್ಸ್ ಕಾಮಗಾರಿ ಪರಿಶೀಲಿಸಿದ ಶಾಸಕ

29kollegal-1,,,,,,
ಕೊಳ್ಳೇಗಾಲ ಪಟ್ಟಣದ ಬಸ್ ನಿಲ್ದಾಣ ಪಕ್ಕದಲ್ಲಿರುವ ರಾಷ್ಟ್ರೀಯ ಹೆದ್ದಾರಿ ಬದಿಗೆ ಅಳವಡಿಸುತ್ತಿರುವ ಇಂಟರ್‌ಲಾಕ್ ಟೈಲ್ಸ್ ಕಾಮಗಾರಿಯನ್ನು ಶಾಸಕ ಎ.ಆರ್.ಕೃಷ್ಣಮೂರ್ತಿ ಪರಿಶೀಲಿಸಿದರು. ರೇಖಾ ರಮೇಶ್, ಎ.ಪಿ.ಶಂಕರ್, ಮಂಜುನಾಥ್, ನವೀನ್, ರಮೇಶ್ ಇದ್ದರು.
Published on

ಕೊಳ್ಳೇಗಾಲ: ನಗರಸಭೆ ವ್ಯಾಪ್ತಿಯ ಬಸ್ ನಿಲ್ದಾಣ ಪಕ್ಕದಲ್ಲಿರುವ ರಾಷ್ಟ್ರೀಯ ಹೆದ್ದಾರಿಯ ಎರಡು ಬದಿಯಲ್ಲಿ ನಡೆಯುತ್ತಿರುವ ಇಂಟಲ್‌ಲಾಕ್ ಟೈಲ್ಸ್ ಅಳವಡಿಕೆ ಕಾಮಗಾರಿಯನ್ನು ಶಾಸಕ ಎ.ಆರ್.ಕೃಷ್ಣಮೂರ್ತಿ ಶುಕ್ರವಾರ ಪರಿಶೀಲಿಸಿದರು.

ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, 2023-24ನೇ ಸಾಲಿನ ನಗರೋತ್ಥಾನದ ಕಾಮಗಾರಿಗಳು ಅಪೂರ್ಣಗೊಂಡಿತು. ಸದಸ್ಯರು ಕಾಮಗಾರಿ ವೀಕ್ಷಣೆ ಮಾಡಬೇಕೆಂದು ಮನವಿ ಮಾಡಿದ್ದರು. ಅದರಂತೆ, ಇಂದು ಕಾಮಗಾರಿ ವೀಕ್ಷಣೆ ಮಾಡಿದ್ದೇನೆ. ಗುತ್ತಿಗೆದಾರರಿಗೆ ತ್ವರಿತವಾಗಿ ಕ್ರೀಯಾ ಯೋಜನೆಯಂತೆ ಗುಣಮಟ್ಟ ಕಾಮಗಾರಿ ನಡೆಯಬೇಕೆಂದು ಅಧಿಕಾರಿಗಳ ಸಮ್ಮುಖದಲ್ಲಿ ಸೂಚನೆ ನೀಡಿದ್ದೇನೆ. ಇನ್ನು ಅಚ್ಗಾಳ್ ವೃತ್ತದ ಎಡ ಭಾಗದಲ್ಲಿರುವ ಚರಂಡಿ ಕಾಮಗಾರಿಯನ್ನು ನಡೆಸಲು ನಗರಸಭೆ ಅಧಿಕಾರಿಗಳಿಗೆ ತಿಳಿಸಿದ್ದೇನೆ. ನಗರೋತ್ಥಾನ 6 ಕೋಟಿ ರೂ. ಅನುದಾನ ಅನುಮೋದನೆಯಾಗಿ ನಡೆಯುತ್ತಿರುವ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.

ಸಿಸಿ ರಸ್ತೆ ನಿರ್ಮಿಸಿ: ಶಾಸಕರ ಭೇಟಿ ವೇಳೆ ಬಸ್ ನಿಲ್ದಾಣ ಸಮೀಪದ ಹೆದ್ದಾರಿಯಲ್ಲಿ ಸಿಗುವ ಅಚ್ಗಾಳ್ ವೃತ್ತದಲ್ಲಿ ವಾಹನಗಳು ಅಡ್ಡಾದಿಡ್ಡಿ ಸಂಚಾರ ಮಾಡುತ್ತಿವೆ. ಬಸ್ ನಿಲ್ದಾಣ ಕಡೆಯಿಂದ ದೇವಾಂಗ ಪೇಟೆಗೆ ತೆರಳಲು ರಾಂಗ್ ರೂಟ್‌ನಲ್ಲಿ ವಾಹನಗಳು ಸಂಚರಿಸುತ್ತಿವೆ. ಅಲ್ಲದೆ, ಈ ಅಚ್ಗಾಳ್ ವೃತ್ತ ದಿಂದ ದೇವಾಂಗ ಪೇಟೆ ಹಾಗೂ ಪ್ರಶಾಂತಿ ಲಾಡ್ಜ್ ಕಡೆಗೆ ಸಂಪರ್ಕಿಸುವ ರಸ್ತೆ ತಗ್ಗಿನಿಂದ ಕೂಡಿದು ಸಂಚಾರಕ್ಕೆ ತೊಂದರೆ ಆಗಿದೆ ಎಂದು ನಗರಸಭೆ ಉಪಾದ್ಯಕ್ಷ ಎ.ಪಿ ಶಂಕರ್ ಸೇರಿದಂತೆ ಕೆಲವು ಸದಸ್ಯರು ಶಾಸಕರ ಗಮನ ಸೆಳೆದರು. ಇದಕ್ಕೆ ಶಾಸಕರು ಸ್ಥಳದಲ್ಲಿದ್ದ ಪೌರಾಯುಕ್ತ ರಮೇಶ್, ಎಇಇ ಸುರೇಶ್, ಇಂಜಿನಿಯರ್ ನಾಗೇಂದ್ರ ಅವರಿಗೆ ದೇವಾಂಗ ಪೇಟೆ ಮತ್ತು ಪ್ರಶಾಂತಿ ಲಾಡ್ಜ್ ಕಡೆಯಿಂದ ಬರುವ 2 ರಸ್ತೆಗಳು ಹೆದ್ದಾರಿ ಸಂಪರ್ಕಿಸುವ ರಸ್ತೆ ಆಗಿರುವುದರಿಂದ ಸಿಸಿ ರಸ್ತೆ ನಿರ್ಮಿಸಿ ರಸ್ತೆಯ ತಗ್ಗನ್ನು ಸರಿಪಡಿಸಬೇಕೆಂದು ತಿಳಿಸಿದರು.

ನಗರಸಭೆ ಅಧ್ಯಕ್ಷೆ ರೇಖಾ ರಮೇಶ್, ಸದಸ್ಯರಾದ ಮಂಜು ನಾಥ್, ಬಸ್ತೀಪುರ ಶಾಂತರಾಜು, ಮನೋಹರ್, ರಾಘವೇಂದ್ರ, ನಾಸೀರ್ ಶರೀಫ್, ಪ್ರಕಾಶ್‌ಶಂಕನಪುರ, ನಗರಸಭೆ ಮಾಜಿ ಅಧ್ಯಕ್ಷ ರಮೇಶ್, ಪಿ.ಡಿ.ರಾಮಚಂದ್ರ, ಇಂಜಿನಿಯರ್ ನವೀನ್, ಮೇಲ್ವಿಚಾರಕ ರವಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net