ಮಳೆಹಾನಿ ಪ್ರದೇಶಗಳ ಪರಿಶೀಲಿಸಿದ ಶಾಸಕ

1ss1kalaji kendra mla visit
ಶಾಸಕ ಮಂತರ್‌ಗೌಡ ಶನಿವಾರಸಂತೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ತೆರೆದಿರುವ ಕಾಳಜಿ ಕೇಂದ್ರವನ್ನು ವೀಕ್ಷಿಸಿದರು.
Published on

ಶನಿವಾರಸಂತೆ: ಶನಿವಾರಸಂತೆ ಮತ್ತು ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಮಳೆಹಾನಿ ಪ್ರದೇಶಗಳಿಗೆ ಬುಧವಾರ ಮಡಿಕೇರಿ ಶಾಸಕ ಡಾ.ಮಂತರ್‌ಗೌಡ ಭೇಟಿ ನೀಡಿ ಪರಿಶೀಲಿಸಿದರು.


ಶನಿವಾರಸಂತೆ ಹೋಬಳಿಯಲ್ಲಿ ಮಳೆಗೆ ಹೆಚ್ಚು ಹಾನಿಯಾದ ಗೌಡಳ್ಳಿ, ಸೀಗೆಮರೂರು ಗ್ರಾಮ ಕೊಡ್ಲಿಪೇಟೆ ಹೋಬಳಿಯ ಕ್ಯಾತೆ ಹೊಳೆ ಮತ್ತು ಹೇಮಾವತಿ ಜಲಾಶಯ ಹಿನ್ನೀರಿನಿಂದ ಅತಿ ಹೆಚ್ಚು ಹಾನಿಗೊಳಗಾದ ಕ್ಯಾತೆ, ಊರುಗುತ್ತಿ, ಬೆಂಬಳೂರು ಮುಂತಾದ ಗ್ರಾಮಗಳಿಗೆ ತೆರಳಿ ಮಳೆಯಿಂದ ಹಾನಿಗೊಳಗಾದ ಕೃಷಿ ಜಮೀನುಗಳನ್ನು ವೀಕ್ಷಿಸಿದರು.
ಶಾಸಕ ಡಾ.ಮಂಥರ್‌ಗೌಡ ಶನಿವಾರಸಂತೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಶನಿವಾರಸಂತೆ ಹೋಬಳಿಗಾಗಿ ಮುಂಜಾಗ್ರತವಾಗಿ ತೆರೆದಿರುವ ಕಾಳಜಿ ಕೇಂದ್ರ ಮತ್ತು ಕೊಡ್ಲಿಪೇಟೆ ಹೋಬಳಿಗಾಗಿ ಕ್ಯಾತೆ ಗ್ರಾಮದ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ತೆರೆದಿರುವ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಇದೇ ವೇಳೆ ಗುಡುಗಳಲೆ ಜಂಕ್ಷನ್‌ನಲ್ಲಿ ಶನಿವಾರಸಂತೆ ಮತ್ತು ದುಂಡಳ್ಳಿ ಗ್ರಾ.ಪಂ. ಅಧ್ಯಕ್ಷರು, ಸದಸ್ಯರು ಶಾಸಕರನ್ನು ಭೇಟಿ ಮಾಡಿ ಕುಂದುಕೊರತೆ ಪರಿಹರಿಸುವಂತೆ ಮನವಿ ಮಾಡಿದರು.

ಸೋಮವಾರಪೇಟೆ ತಹಸೀಲ್ದಾರ್ ನವೀನ್‌ಕುಮಾರ್, ತಹಸೀಲ್ದಾರ್ ಗ್ರೇಡ್-2 ಶ್ರೀಧರ್ ಹಾಗೂ ಶನಿವಾರಸಂತೆ ಮತ್ತು ಕೊಡ್ಲಿಪೇಟೆ ಹೋಬಳಿಯ ಕಂದಾಯ ಇಲಾಖೆಯ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net