ಟಿಎಪಿಸಿಎಂಎಸ್ ಬ್ಯಾಂಕ್ ಉದ್ಘಾಟಿಸಿದ ಶಾಸಕ

SRP_05-02jpj
ಶ್ರೀರಂಗಪಟ್ಟಣದ ತಾಲೂಕು ವ್ಯವಸಾಯೋತ್ಪನ್ನ ಮಾರುಕಟ್ಟೆ ಸಹಕಾರ ಸಂಘದಲ್ಲಿ ಆರಂಭವಾದ ಟಿಎಪಿಸಿಎಂಎಸ್ ಬ್ಯಾಂಕ್‌ಗೆ ಶಾಸಕ ರಮೇಶ ಬಂಡಿಸಿದ್ದೇಗೌಡ ಚಾಲನೆ ನೀಡಿದರು. ಸಂಘದ ಅಧ್ಯಕ್ಷ ಎಂ.ನಂದೀಶ್ ಇತರರು ಇದ್ದರು.
Published on

ಶ್ರೀರಂಗಪಟ್ಟಣ: ತಾಲೂಕು ವ್ಯವಸಾಯೋತ್ಪನ್ನ ಮಾರುಕಟ್ಟೆ ಸಹಕಾರ ಸಂಘದಿಂದ ನೂತನವಾಗಿ ಆರಂಭಗೊಂಡ ಟಿಎಪಿಸಿಎಂಎಸ್ ಬ್ಯಾಂಕ್ ಅನ್ನು ಸೋಮವಾರ ಶಾಸಕ ರಮೇಶ ಬಂಡಿಸಿದ್ದೇಗೌಡ ಉದ್ಘಾಟಿಸಿದರು.

ಪಟ್ಟಣದ ಟಿಎಪಿಸಿಎಂಎಸ್ ಕಟ್ಟಡದಲ್ಲಿ ಸಂಘದ ಪದಾಧಿಕಾರಿಗಳು ಹಾಗೂ ಕ್ಷೇತ್ರದ ಷೇರುದಾರರ ಸಹಕಾರರೊಂದಿಗೆ ಆಯೋಜಿಸಿದ್ದ ಸರಳ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದಾನಿಗಳು ಹಾಗೂ ಕ್ಷೇತ್ರದ ರೈತರಿಂದ ಪ್ರಾರಂಭವಾದ ತಾಲೂಕು ವ್ಯವಸಾಯೋತ್ಪನ್ನ ಮಾರುಕಟ್ಟೆಯನ್ನು ಕ್ರಿಯಾಶೀಲವಾಗಿ ಮುನ್ನಡೆಸಬೇಕು ಎಂದರು.

ಟಿಎಪಿಸಿಎಂಎಸ್ ಅಧ್ಯಕ್ಷ ಎಂ.ನಂದೀಶ್ ಮಾತನಾಡಿ, ಸಂಘದಲ್ಲಿ ಒಟ್ಟು 5262 ಷೇರುದಾರರಿದ್ದು, ಇದರಲ್ಲಿ 3696 ಪೂರ್ಣ ಪ್ರಮಾಣದ ಷೇರುದಾರರನ್ನು ಸಂಘ ಒಳಗೊಂಡಿದೆ. ಪ್ರಸಕ್ತ ಸಾಲಿನಲ್ಲಿ ಬ್ಯಾಂಕ್ ಆರಂಭಿಸಿರುವ ಹಿನ್ನೆಲೆಯಲ್ಲಿ ಷೇರುದಾರರಿಗೆ ಚುನಾವಣೆಯಲ್ಲಿ ಚಲಾಯಿಸುವ ಹಕ್ಕು ಲಭಿಸುವ ಜತೆಗೆ ಚುನಾವಣೆಗೆ ನಿಲ್ಲುವ ಅವಕಾಶವಿರಲಿದೆ. ಸಂಘದಲ್ಲಿ ಠೇವಣಿ ಇಡುವವರಿಗೆ ಅವಧಿಗೆ ತಕ್ಕಂತೆ ಬಡ್ಡಿ ನೀಡುವ ಜತೆಗೆ ಹಿರಿಯ ನಾಗರಿಕರಿಗೆ ಹೆಚ್ಚು ದರದಲ್ಲಿ ಬಡ್ಡಿ ನೀಡಲಾಗುವುದು ಎಂದು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷೆ ಲಕ್ಷ್ಮೀ ದೇವಮ್ಮ, ಸದಸ್ಯರಾದ ಕಾಂತಮಣಿ, ಬಸ್ತೀಪುರ ನಾಗರಾಜು, ನರಸಿಂಹೇಗೌಡ, ರಾಮಲಿಂಗೇಗೌಡ, ಸಹಕಾರ ಅಭಿವೃದ್ದಿ ಅಧಿಕಾರಿ ಪಾರ್ವತಮ್ಮ, ಕಾರ್ಯದರ್ಶಿ ಶಂಕರ್, ಭರತ್ ಕುಮಾರ್, ಪುರಸಭ ಸದಸ್ಯ ಎಂ.ಎಲ್.ದಿನೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net