ಯರಗಟ್ಟಿ ಕ್ಷೇತ್ರದಿಂದ ಶಾಸಕ ವಿಶ್ವಾಸ ವೈದ್ಯ ನಾಮಪತ್ರ ಸಲ್ಲಿಕೆ

IMG-20251009-WA0155.jpg
Published on

ಬೆಳಗಾವಿ: ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಡಿಸಿಸಿ) ಆಡಳಿತ ಮಂಡಳಿ‌ ನಿರ್ದೇಶಕ ಸ್ಥಾನದ ಚುನಾವಣೆ ಹಿನ್ನೆಲೆ ಬುಧವಾರ ಯರಗಟ್ಟಿ ತಾಲೂಕು ಕ್ಷೇತ್ರದಿಂದ ಶಾಸಕ ವಿಶ್ವಾಸ ವೈದ್ಯ ಅವರು ನಾಮಪತ್ರ ಸಲ್ಲಿಸಿದರು. ಶಾಸಕ‌ಬಾಲಚಂದ್ರ ಜಾರಕಿಹೊಳಿ ,‌ ಮಾಜಿ ಶಾಸಕರು,‌ಪಿಕೆಪಿಎಸ್ ಅಧ್ಯಕ್ಷ, ಸದಸ್ಯರು ಸಾಥ್ ನೀಡಿದರು.

ಬೆಳಗಾವಿ ನಗರದ ಡಿಸಿಸಿ ಬ್ಯಾಂಕ್ ಆವರಣದಲ್ಲಿ ಬುಧವಾರ ಚುನಾವಣಾ ಅಧಿಕಾರಿ ಶ್ರವಣ ನಾಯಕ ಅವರಿಗೆ ನಾಮಪತ್ರ ಸಲ್ಲಿಸಿದರು.‌ಈ ವೇಳೆ ಬೆಮುಲ್ ಅಧ್ಯಕ್ಷ, ಶಾಸಕ‌‌ ಬಾಲಚಂದ್ರ ಜಾರಕಿಹೊಳಿ, ಮಾಜಿ ಸಂಸದ ಅಣ್ಣಾಸಾಹೇಬ ಜೋಲ್ಲೆ, ಮಾಜಿ ಶಾಸಕ ಅರವಿಂದ ಪಾಟೀಲ ಇತರರು ಕೈ ಜೋಡಿಸಿದರು.

ನಾಮಪತ್ರ ಸಲ್ಲಿಸಿ ಹೊರಬರುತ್ತಿದ್ದಂತೆ ಬೆಂಬಲಿಗರು ಶಾಸಕ‌ ವಿಶ್ವಾಸ ವೈದ್ಯ ಅವರನ್ನು ಹೆಗಲ‌ಮೇಲೆ ಹೊತ್ತು ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆ ಮಾಡಿ ಸಂಭ್ರಮಿಸಿದರು. ಶಂಕರ ಇಟ್ನಾಳ್, ವಿಠ್ಠಲ ಬಂಟನೂರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net