

ಭರಮಸಾಗರ: ಪಕ್ಷ, ಜಾತಿ ನನಗೆ ಗೊತ್ತಿಲ್ಲ. ಮುಂಚಿನಿಂದಲೂ ಕ್ಷೇತ್ರದ ಅಭಿವೃದ್ಧಿಯೊಂದೇ ನನ್ನ ಮೂಲ ಮಂತ್ರ ಎಂದು ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ಹೇಳಿದರು.
ಯಳಗೋಡು ಗ್ರಾಮದಲ್ಲಿ ಗುರುವಾರ ಸಮುದಾಯ ಭವನ ಉದ್ಘಾಟಿಸಿ ಮಾತನಾಡಿ, ಸಾರ್ವಜನಿಕರ ಕೆಲಸವನ್ನು ರಾಜಕಾರಣಿ ತನ್ನ ಸ್ವಂತದ್ದು ಎಂದುಕೊಂಡು ನಿರ್ವಹಿಸಬೇಕು.
ಜನತೆಯ ಕುಂದು-ಕೊರತೆ ಆಲಿಸಿ ಪರಿಹಾರ ಒದಗಿಸುವುದು ಜನಪ್ರತಿನಿಧಿಯ ಆದ್ಯ ಕರ್ತವ್ಯಎಂದರು.
ಗ್ರಾಪಂ ಅಧ್ಯಕ್ಷೆ ಬಸಮ್ಮ ಮಹಾಂತೇಶ್, ಉಪಾಧ್ಯಕ್ಷೆ ಕವಿತಾ, ರೂಪಾ, ಕಾಳೆಬಸಣ್ಣ, ಅನಿತಾ ನಾಗರಾಜ್, ಪಾರ್ವತಮ್ಮ, ಶಾಂತಕುಮಾರ್, ಪಾಲಯ್ಯ, ಹನುಮಂತಪ್ಪ, ಮುರುಗೇಶ್, ಚಿತ್ರಪ್ಪ, ಬೋಗೇಶ್, ಶರಣಪ್ಪ, ಬೆನ್ನೂರು ರಾಜಣ್ಣ, ಪ್ರಭು, ವೀರೇಂದ್ರಣ್ಣ ಇತರರಿದ್ದರು.