ಜನಪರ ಆಡಳಿತಕ್ಕೆ ಬದ್ಧ:ಶಾಸಕ ರಾಘವೇಂದ್ರ ಹಿಟ್ನಾಳ್

MLA HITNAL PEOPLE FRIENDLY ADMINISTRATION KOPPAL
MLA HITNAL PEOPLE FRIENDLY ADMINISTRATION KOPPAL
ಕೊಪ್ಪಳ ತಾಲೂಕಿನ ಹಾಲವರ್ತಿ ಗ್ರಾಮದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜನಸಂಪರ್ಕ ಸಭೆಯಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ್‌ಗೆ ಸನ್ಮಾನಿಸಲಾಯಿತು. ಪಿಡಿಒ ಬೆಟದಪ್ಪ, ಬಿಲ್ ಕಲೆಕ್ಟರ್ ಶಂಕರ ನಾಯ್ಕ, ಪ್ರಮುಖರಾದ ಶಂಕರ್, ಹನುಮೇಶ ಇದ್ದರು.
Published on

ಕೊಪ್ಪಳ: ರಾಜ್ಯದಲ್ಲಿ ನಮ್ಮ ಸರ್ಕಾರ ಜನಪರ ಆಡಳಿತ ನಡೆಸುತ್ತಿದೆ. ಐದು ವರ್ಷಗಳ ಕಾಲ ಜನರ ಕಲ್ಯಾಣಕ್ಕಾಗಿ ಶ್ರಮಿಸಲಿದೆ ಎಂದು ಶಾಸಕ ರಾಘವೇಂದ್ರ ಹಿಟ್ನಾಳ್ ಹೇಳಿದರು.

ತಾಲೂಕಿನ ಗೊಂಡಬಾಳ ಜಿಪಂ ಕ್ಷೇತ್ರದ ಹಾಲವರ್ತಿ, ಕುಣಿಕೇರಿ ತಾಂಡ, ಕುಣಿಕೇರಿ, ಲಾಚನಕೇರಿ, ಕರ್ಕಿಹಳ್ಳಿ, ಚಿಕ್ಕಬಗನಾಳ, ಹಿರೇಬಗನಾಳ, ಕಾಸನಕಂಡಿ ಹಾಗೂ ಅಲ್ಲಾನಗರ ಗ್ರಾಮಗಳಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜನಸಂಪರ್ಕ ಸಭೆಯಲ್ಲಿ ಮಾತನಾಡಿದರು.

ರಾಜ್ಯದ ಜನತೆ ನಮ್ಮ ಮೇಲೆ ವಿಸ್ವಾಸವನ್ನಿಟ್ಟು ಸ್ಪಷ್ಟ ಬಹುಮತ ನೀಡಿ ಆಶೀರ್ವದಿಸಿದ್ದಾರೆ. ಜನರ ಆಶಯ ತಕ್ಕಂತೆ ನಮ್ಮ ಸರ್ಕಾರ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಜನಕಲ್ಯಾಣಕ್ಕಾಗಿ ಬದ್ಧವಾಗಿದೆ. ಐದು ವರ್ಷ ಜನಪರ ಆಡಳಿತ ನೀಡುತ್ತೇವೆ.

ಕೆಕೆಆರ್‌ಡಿಬಿಯಡಿ ಕ್ಷೇತ್ರಕ್ಕೆ 85 ಕೋಟಿ ರೂ. ಅನುದಾನ ಬಂದಿದೆ. ಕ್ಷೇತ್ರದ 104 ಗ್ರಾಮಗಳಿಗೂ ಸಮಾನವಾಗಿ ಅನುದಾನ ಹಂಚಿಕೆ ಮಾಡಿ ಅಭಿವೃದ್ಧಿಪಡಿಸಲಾಗುವುದೆಂದು ಭರವಸೆ ನೀಡಿದರು.

ಕಾರ್ಯಕ್ರಮಕ್ಕು ಮುನ್ನ ಕೊಪ್ಪಳದ ಪಿಎಲ್‌ಡಿ ಬ್ಯಾಂಕ್ ವಾಣಿಜ್ಯ ಸಂರ್ಕಿಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು. ಜಿಪಂ ಮಾಜಿ ಸದಸ್ಯ ಗೂಳಪ್ಪ ಹಲಗೇರಿ, ಗ್ರಾಪಂ ಅಧ್ಯಕ್ಷೆ ಜಯಪ್ರದಾ ಗೊರವರ್, ಪ್ರಮುಖರಾದ ಗಾಳೆಪ್ಪ ಪೂಜಾರ,

ರಾಮಣ್ಣ ಕಲ್ಲನವರ, ಹೇಮಣ್ಣ ದೇವರಮನಿ, ಹನುಮಂತಪ್ಪ ಕಿಡದಾಳ, ಕಮಾರ ಮಜ್ಜಿಗಿ, ಆನಂದ ಕಿನ್ನಾಳ, ವಿರುಪಣ್ಣ ಕುಣಿಕೇರಿ, ಮಹೇಶ, ತಹಸೀಲ್ದಾರ್ ವಿಠ್ಠಲ ಚೌಗಲಾ, ತಾಪಂ ಇಒ ದುಂಡಪ್ಪ ತುರಾದಿ, ಪಿಡಿಒ ಬೆಟದಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net