ಶಾಸಕ ಹೆಬ್ಬಾರ ಜನ್ಮದಿನ ಆಚರಣೆ

Hebbar Birthday celebaration
Published on

ಯಲ್ಲಾಪುರ: ಶಾಸಕ ಶಿವರಾಮ ಹೆಬ್ಬಾರ ಅವರ ಜನ್ಮದಿನದ ಪ್ರಯುಕ್ತ ಹೆಬ್ಬಾರ ಅವರ ಅಭಿಮಾನಿಗಳು ಹಾಗೂ ಬ್ಲಾಕ್ ಕಾಂಗ್ರೆಸ್​ವತಿಯಿಂದ ಬುಧವಾರ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ಹಾಲು,ಹಣ್ಣು ವಿತರಿಸಲಾಯಿತು.

ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ 26 ಜನ ಪ್ರವಾಸಿಗರು ಹತ್ಯೆಯಾದ ಹಿನ್ನೆಲೆಯಲ್ಲಿ ಸಾರ್ವಜನಿಕವಾಗಿ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸದೇ ಇರಲು ಶಾಸಕರು ನಿರ್ಧರಿಸಿದ್ದರು. ತಮ್ಮ ನಿವಾಸದತ್ತ ಬಂದು ಶುಭಕೋರದಂತೆ ವಿನಂತಿಸಿದ್ದರು.

ಹಾಗಾಗಿ ತಾಲೂಕಿನ ಸುತ್ತ ಮುತ್ತಲಿನ ನೂರಾರು ಅಭಿಮಾನಿಗಳು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಜಮಾಯಿಸಿದ್ದು, ರೋಗಿಗಳಿಗೆ ಹಣ್ಣು ಹಂಪಲು ವಿತರಿಸುವ ಮೂಲಕ ವಿಧಾಯಕ ಕಾರ್ಯದಲ್ಲಿ ಭಾಗಿಯಾದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಎಸ್. ಭಟ್ಟ ಉಪಳೇಶ್ವರ, ನಿಕಟಪೂರ್ವ ಅಧ್ಯಕ್ಷ ಎನ್.ಕೆ. ಭಟ್, ಇಡಗುಂದಿ ಗ್ರಾ.ಪಂ. ಅಧ್ಯಕ್ಷ ಶ್ರೀಕಾಂತ ಶೆಟ್ಟಿ, ಜಿಪಂ ಮಾಜಿ ಸದಸ್ಯ ವಿಜಯ ಮಿರಾಶಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರವಿ ಭಟ್ ಬರಗದ್ದೆ, ಬ್ಲಾಕ್ ಕಾರ್ಯದರ್ಶಿ ಅನಿಲ ಮರಾಠಿ, ಪ.ಪಂ ಉಪಾಧ್ಯಕ್ಷ ಅಮಿತ ಅಂಗಡಿ, ವಿಕಾಸ ಅರ್ಬನ್ ಬ್ಯಾಂಕ್ ಅಧ್ಯಕ್ಷ ಮುರಳಿ ಹೆಗಡೆ, ಪ್ರಮುಖರಾದ ಸುಜಾತಾ ಸಿದ್ದಿ, ರಾಧಾ ಹೆಗಡೆ, ಪೂಜಾ ನೇತ್ರೆಕರ್, ಸರಸ್ವತಿ ಗುನಗಾ, ಶಿವರಾಮ ಮಡಿವಾಳ ಸೇರಿದಂತೆ ಪಕ್ಷದ ವಿವಿಧ ಸ್ಥರದ ಪದಾಧಿಕಾರಿಗಳು, ಕಾರ್ಯಕರ್ತರು, ಅಭಿಮಾನಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net