

ಹುಣಸೂರು : ತಾಲೂಕಿನ ಗಾವಡಗೆರೆ ಹೋಬಳಿಯ ಮರೂರು ಗ್ರಾಮದಲ್ಲಿ 2 ಕೋಟಿ ರೂ.ವೆಚ್ಚದಡಿ ಅಭಿವೃದ್ಧಿಗೊಳ್ಳಲಿರುವ ಮರೂರು-ಮರೂರು ಕಾವಲು ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಶಾಸಕ ಜಿ.ಡಿ. ಹರೀಶ್‌ಗೌಡ ಸೋಮವಾರ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಲೋಕೋಪಯೋಗಿ ಇಲಾಖೆಯಿಂದ 5 ಕಿ.ಮೀ. ರಸ್ತೆ ಅಭಿವೃದ್ಧಿ ಕಾಮಗಾರಿ ಯೊಂದಿಗೆ ಸಿ.ಸಿ. ಚರಂಡಿ ನಿರ್ಮಾಣವೂ ನಡೆಯಲಿದೆ ಎಂದರು. ತಾಲೂಕಿನ ಹಾರಂಗಿ ಬಲದಂಡೆಯ ಎಂಬಿಸಿ ನಾಲೆಗೆ ಸಂಪೂರ್ಣವಾಗಿ ಕಾಂಕ್ರೀಟ್ ಹಾಗೂ ನಾಲೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಜಲ ಸಂಪನ್ಮೂಲ ಸಚಿವರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ 900 ಕೋಟಿ ರೂ.ಗಳ ಅನುದಾನ ನೀಡಲು ಸಮ್ಮತಿಸಿದ್ದಾರೆ. ಸಚಿವ ಸಂಪುಟದಲ್ಲಿ ಒಪ್ಪಿಗೆ ದೊರೆತ ಕೂಡಲೇ ಟೆಂಡರ್ ಕರೆಯಲಾಗುವುದು. ಹುಣಸೂರು ತಾಲೂಕಿನ ಕೊನೆಯ ಭಾಗದ ರೈತರಿಗೂ ಕೃಷಿಗೆ ನೀರು ತಲುಪಿಸುವ ನಿಟ್ಟಿನಲ್ಲಿ ಯಶವಾಗಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಪ್ರಭಾಕರ್, ಪಿಡಿಒ ಪ್ರಕಾಶ್, ಜಾದಳ ಮುಖಂಡ ಹರವೆ ಶ್ರೀಧರ, ಗ್ರಾಮ ಪಂಚಾಯಿತಿ ಸದಸ್ಯ ಫಾರೂಖ್, ಗ್ರಾಮದ ಯಜಮಾನರಾದ ಮಹದೇವಪ್ಪ. ಜಗದೀಶ್ ಅಬ್ದುಲ್ ಸುಭಾನ್, ಡೇರಿ ಮಾಜಿ ಅಧ್ಯಕ್ಷ ಹರೀಶ್ ಕಾವಲ್, ಮುಖಂಡ ರಾದ ಸ್ವಾಮಿ ಗೌಡ, ಶಿವರಾಜು, ಡೇರಿ ಚಂದ್ರಣ್ಣ, ಎಳನೀರು ಚಂದನಾಯಕ, ಶಿವರಾಜು, ಪುಟ್ಟರಾಜು, ನಿವೃತ್ತ ಗ್ರಾಮ ಲೆಕ್ಕಿಗ ಶಿವೇಗೌಡ ಇತರರು ಹಾಜರಿದ್ದರು.
8ಊಓ7: )
ಹುಣಸೂರು ತಾಲೂಕು ಮರೂರು ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಜಿ.ಡಿ.ಹರೀಶ್‌ಗೌಡ ಸೋಮವಾರ ಚಾಲನೆ ನೀಡಿದರು. ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಪ್ರಭಾಕರ್, ಪಿಡಿಒ ಪ್ರಕಾಶ್, ಮುಖಂಡರಾದ ಹರವೆ ಶ್ರೀಧರ, ಜಗದೀಶ್, ಜಯರಾಮೇಗೌಡ, ಸ್ವಾಮಿಗೌಡ ಇದ್ದರು.