ರಾಜ್ಯ ಸರ್ಕಾರದಿಂದ ಎಲ್ಲ ಸಮಾಜದ ಅಭಿವೃದ್ಧಿ

13 sgr 3
Published on

ಸಾಗರ: ರಾಜ್ಯ ಸರ್ಕಾರ ಎಲ್ಲ ಸಮಾಜದ ಏಳಿಗೆಗೆ ಶ್ರಮಿಸುತ್ತಿದ್ದು, ತಾಲೂಕಿನಲ್ಲಿ ಎಲ್ಲ ಸಮಾಜಗಳ ಸಮುದಾಯ ಭವನ, ಕಲ್ಯಾಣ ಮಂಟಪ ನಿರ್ವಣಕ್ಕೆ ಹೆಚ್ಚಿನ ಅನುದಾನ ನೀಡಲಾಗಿದೆ ಎಂದು ಶಾಸಕ ಹರತಾಳು ಹಾಲಪ್ಪ ಹೇಳಿದರು.

ಕೆಳದಿ ರಸ್ತೆಯ ಶ್ರೀಗುರುವೀರ ಮಡಿವಾಳ ಮಾಚಯ್ಯ ದೇವಸ್ಥಾನದ ಸಮುದಾಯ ಭವನಕ್ಕೆ ಬಿಡುಗಡೆಯಾದ 25 ಲಕ್ಷ ರೂ.ವೆಚ್ಚದ ಸಮುದಾಯ ಭವನ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸಾಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸುಮಾರು 50ಕ್ಕೂ ಹೆಚ್ಚು ಸಮುದಾಯಗಳಿಗೆ ಕಲ್ಯಾಣ ಮಂಟಪ, ಸಮುದಾಯ ಭವನ ನಿರ್ವಣಕ್ಕೆ ಆರ್ಥಿಕ ಸಹಕಾರ ನೀಡಲಾಗಿದೆ. ಪ್ರಮುಖವಾಗಿ ಮಡಿವಾಳ ಸಮಾಜಕ್ಕೆ 50 ಲಕ್ಷ ರೂ.ನೀಡಲಾಗಿದೆ, ಜತೆಗೆ ಯಲ್ಲಮ್ಮ ದೇವಸ್ಥಾನಕ್ಕೆ 50 ಲಕ್ಷ ರೂ. ಹೊಸನಗರದ ಬಿಲ್ವಪತ್ರೆ ಗ್ರಾಮದಲ್ಲಿ ಸಮುದಾಯ ಭವನ ನಿರ್ವಣಕ್ಕೆ 30 ಲಕ್ಷ ರೂ. ನೀಡಲಾಗಿದೆ. ಗಂಗಾಮತ ಸಮಾಜ, ದತ್ತಮಂದಿರ, ಈಡಿಗ ಸಮಾಜ, ಲಿಂಗಾಯಿತ ಸಮಾಜ ಹೀಗೆ ಎಲ್ಲ ಸಮುದಾಯಗಳಿಗೂ ಅನುದಾನ ನೀಡಲಾಗಿದೆ ಎಂದು ತಿಳಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ನಗರಸಭೆ ಉಪಾಧ್ಯಕ್ಷ ವಿ.ಮಹೇಶ್, ಸದಸ್ಯರಾದ ಮೈತ್ರಿ ವಿ.ಪಾಟೀಲ್, ಕೆ.ಆರ್.ಗಣೇಶಪ್ರಸಾದ್, ಡಿ. ತುಕಾರಾಮ್ ಭಾವನಾ ಸಂತೋಷ್, ಪ್ರೇಮಾ ಕಿರಣ್ ಸಿಂಗ್, ಮಡಿವಾಳ ಸಮಾಜದ ಅಧ್ಯಕ್ಷ ಕೊಟ್ರಪ್ಪ, ಪ್ರಮುಖರಾದ ಪುರುಷೋತ್ತಮ್ ವಿಘ್ನೕಶ್, ಟಿ.ಆರ್.ಸತ್ಯನಾರಾಯಣ್, ರಾಜು ಬಿ. ಮಡಿವಾಳ, ಸಂತೋಷ್ ಕೆ.ಜಿ., ಸá-ೕಂದ್ರ, ಸುನೀಲ್ ಕುಮಾರ್, ಮಹೇಶ್, ಉದಯ ಇನ್ನಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net