

ಗಜೇಂದ್ರಗಡ: ಊರಿನ ಕೊಳೆ ತೆಗೆದು ಸ್ವಚ್ಛತೆಯ ಹೊಳೆ ಹರಿಸುವ ಪೌರ ಕಾರ್ವಿುಕರೇ ಪುರಸಭೆಯ ಬೆನ್ನೆಲುಬು ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಪಟ್ಟಣದ ತಿರುಪತಿ ತಿರುಮಲ ಕಲ್ಯಾಣ ಮಂಟಪದಲ್ಲಿ ಪುರಸಭೆ ವತಿಯಿಂದ ಸೋಮವಾರ ಆಯೋಜಿಸಿದ್ದ ಪೌರಕಾರ್ವಿುಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪಟ್ಟಣದ ಸ್ವಚ್ಛತೆಗೆ ಪೂರಕವಾಗಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ವರ್ಗ, ಕುಡಿಯುವ ನೀರಿನ ಸರಬರಾಜು, ಕಸ ವಿಲೇವಾರಿ ಸೇರಿ ಹಲವು ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಕಾರ್ವಿುಕರ ಬವಣೆ ದೂರವಾಗಿಸುವಲ್ಲಿ ಸರ್ಕಾರದ ಯೋಜನೆಗಳು ಫಲಕಾರಿಯಾಗುವಂತೆ ವೈಯಕ್ತಿಕ ಕಾಳಜಿ ವಹಿಸುವುದಾಗಿ ಭರವಸೆ ನೀಡಿದರು.
ಪುರಸಭೆ ಅಧ್ಯಕ್ಷ ಸುಭಾಸ ಮ್ಯಾಗೇರಿ ಮಾತನಾಡಿ, ಪಟ್ಟಣ ಜನರು ಆರೋಗ್ಯಯುತವಾಗಿರುವಲ್ಲಿ ಪೌರ ಕಾರ್ವಿುಕರ ಪಾತ್ರ ಅತ್ಯಂತ ಹಿರಿದು. ಈ ದಿಸೆಯಲ್ಲಿ ಅವರನ್ನು ಗೌರವಯುತವಾಗಿ ಕಾಣಬೇಕು ಎಂದರು.
ಪುರಸಭೆ ಉಪಾಧ್ಯಕ್ಷ ಸವಿತಾ ಬಿದರಳ್ಳಿ, ಸದಸ್ಯರಾದ ಶಿವರಾಜ ಘೊರ್ಪಡೆ, ಮುರ್ತಜಾ ಡಾಲಾಯತ, ಶರಣಪ್ಪ ಉಪ್ಪಿನಬೆಟಗೇರಿ, ವೆಂಕಟೇಶ ಮುದಗಲ್ಲ, ವಿಜಯಾ ಮಳಗಿ, ದ್ರಾಕ್ಷಾಯಿಣಿ ಚೋಳಿನ, ಮುದಿಯಪ್ಪ ಮುಧೋಳ, ರಾಜು ಸಾಂಗ್ಲಿಕರ, ಪ್ರಭಾರಿ ಮುಖ್ಯಾಧಿಕಾರಿ ಬಸವರಾಜ ಬಳಗಾನೂರ, ಸಿದ್ದಪ್ಪ ಬಂಡಿ, ಆರ್.ಎಂ. ರಾಯಬಾಗಿ, ಶಿವಪ್ಪ ಮಾದರ, ನಿಂಗಪ್ಪ ಮೂಲಿಮನಿ, ಹನಮಂತ ಚಲವಾದಿ, ಇದ್ದರು.