ಶಾಸಕ ಗೋಪಾಲಕೃಷ್ಣ ಬೇಳೂರು ದ್ವೇಷ ರಾಜಕಾರಣ ಮಾಡುತ್ತಿಲ್ಲ

25sgr4 (1)
ಸಾಗರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಸೋಮಶೇಖರ್ ಲ್ಯಾವಿಗೆರೆ ಮಾತನಾಡಿದರು.
Published on

ಸಾಗರ: ಕಾಂಗ್ರೆಸ್ ಪಕ್ಷವಾಗಲಿ, ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಆಗಲಿ ದ್ವೇಷದ ರಾಜಕಾರಣ ಮಾಡುತ್ತಿಲ್ಲ ಎಂದು ತಾಪಂ ಮಾಜಿ ಸದಸ್ಯ ಸೋಮಶೇಖರ್ ಲ್ಯಾವಿಗೆರೆ ತಿಳಿಸಿದರು.

ಹಿಂದೆ ದ್ವೇಷದ ರಾಜಕಾರಣ ಮಾಡಿರುವವರನ್ನು ಮತದಾರರು ಸೋಲಿಸಿ ಮನೆಗೆ ಕಳುಹಿಸಿದ್ದಾರೆ. ಕ್ಷೇತ್ರದ ಜನತೆ ನಮ್ಮ ಶಾಸಕರ ಪ್ರೀತಿ ವಿಶ್ವಾಸವನ್ನು ನೋಡಿಯೇ ಗೆಲ್ಲಿಸಿದ್ದಾರೆ. ಎಲ್ಲರ ಸಹಕಾರ ವಿಶ್ವಾಸ ಪಡೆದು ಅವರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ರತ್ನಾಕರ ಹೊನಗೋಡು ಸೇರಿದಂತೆ ಕೆಲವು ಬಿಜೆಪಿ ನಾಯಕರು ತಮ್ಮ ಅಸ್ತಿತ್ವ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಎಲ್ಲಿ ತಾವು ಮೂಲೆಗುಂಪಾಗುತ್ತೇವೋ ಎನ್ನುವ ಭೀತಿಯಲ್ಲಿ ಶಾಸಕರ ವಿರುದ್ದ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ದೂರಿದರು.
ಪ್ರಮುಖರಾದ ತಾರಾಮೂರ್ತಿ, ಮಹಾಬಲ ಕೌತಿ, ಗಣಪತಿ ಮಂಡಗಳಲೆ, ಗಿರೀಶ್ ಕೋವಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net