ಸಿದ್ದರಾಮಯ್ಯ ಅವಧಿಯಲ್ಲಿ ಜನಪರ ಯೋಜನೆಗಳು ಜಾರಿ: ಶಾಸಕ ಜನಾರ್ದನ ರೆಡ್ಡಿ

GRUHALAKSHMI
ಗಂಗಾವತಿ ತಾಲೂಕಿನ ವಡ್ಡರಹಟ್ಟಿ ಕ್ಯಾಂಪ್ ರೈತ ತರಬೇತಿ ಕೇಂದ್ರದ ಸಭಾಂಗಣದಲ್ಲಿ ಜಿಲ್ಲಾಡಳಿತದಿಂದ ಆಯೋಜಿಸಿದ್ದ ಗೃಹಲಕ್ಷ್ಮೀ ಯೋಜನೆಯನ್ನು ಶಾಸಕ ಗಾಲಿ ಜನಾರ್ದನರೆಡ್ಡಿ ಬುಧವಾರ ಉದ್ಘಾಟಿಸಿದರು. ಗ್ರಾಪಂ ಅಧ್ಯಕ್ಷೆ ಮಂಜುಳಾ ಶಿವಪ್ಪ ಹತ್ತಿಮರದ, ಜಿಪಂ ಉಪಕಾರ್ಯದರ್ಶಿ ಮಲ್ಲಯ್ಯ ತೊದಲಬಾಗಿ ಇತರರಿದ್ದರು.
Published on

ಗಂಗಾವತಿ: ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ಸ್ವಯಂ ಉದ್ಯೋಗ ಯೋಜನೆ ಶೀಘ್ರದಲ್ಲಿ ಕಲ್ಪಿಸಲಾಗುತ್ತಿದ್ದು, ಗಾರ್ಮೆಂಟ್ಸ್ ್ಯಾಕ್ಟರ್ ಆರಂಭಿಸಲಾಗುವುದು ಎಂದು ಶಾಸಕ ಗಾಲಿ ಜನಾರ್ದನರೆಡ್ಡಿ ಹೇಳಿದರು.

ತಾಲೂಕಿನ ವಡ್ಡರಹಟ್ಟಿ ಕ್ಯಾಂಪ್ ರೈತ ತರಬೇತಿ ಕೇಂದ್ರದ ಸಭಾಂಗಣದಲ್ಲಿ ಜಿಲ್ಲಾಡಳಿತ ಬುಧವಾರ ಆಯೋಜಿಸಿದ್ದ ಗೃಹಲಕ್ಷ್ಮೀ ಯೋಜನೆ ಉದ್ಘಾಟಿಸಿ ಮಾತನಾಡಿದರು. ಚುನಾವಣೆ ಪೂರ್ವದಲ್ಲಿ ನೀಡಿದ ಭರವಸೆಯಂತೆ ಸ್ವಾವಲಂಬಿ ಜೀವನಕ್ಕೆ ಪೂರಕ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದ್ದು, ಕೌಶಲ ತರಬೇತಿಯೊಂದಿಗೆ ಸ್ವಯಂ ಉದ್ಯೋಗ ಘಟಕ ಆರಂಭಿಸಲಾಗುವುದು ಎಂದರು.

ಕೆಆರ್‌ಪಿಪಿ ಪ್ರಣಾಳಿಕೆಯಲ್ಲಿ ಮಹಿಳೆಯರಿಗೆ ಮಾಸಿಕ 2500 ರೂ. ನೀಡುವ ಬಗ್ಗೆ ೋಷಿಸಲಾಗಿತ್ತಾದರೂ, ಅಧಿಕಾರ ಸಿಕ್ಕಿಲ್ಲ. ಕಾಂಗ್ರೆಸ್ ಸರ್ಕಾರ ಗೃಹಲಕ್ಷ್ಮೀ ಯೋಜನೆ ಮೂಲಕ ಮಾಸಿಕ 2000 ರೂ. ನೀಡುತ್ತಿರುವುದು ಸ್ವಾಗತಾರ್ಹ. ಜನಪರ ಯೋಜನೆಗಳು ಸಿಎಂ ಸಿದ್ದರಾಮಯ್ಯ ಆಡಳಿತಾವಧಿಯಲ್ಲಿ ಜಾರಿಯಾಗುತ್ತಿವೆ ಎಂದು ಹೇಳಿದರು.

ಗ್ರಾಪಂ ಅಧ್ಯಕ್ಷೆ ಮಂಜುಳಾ ಶಿವಪ್ಪ ಹತ್ತಿಮರದ ಮಾತನಾಡಿದರು. ಮೈಸೂರು ಕಾರ್ಯಕ್ರಮದ ನೇರ ವೀಕ್ಷಣೆ ನಂತರ, ಯೋಜನೆ ಕುರಿತು ಲಾನುಭವಿಗಳಿಂದ ಸಂವಾದ ಜರುಗಿತು. ಗ್ರಾಪಂ ಉಪಾಧ್ಯಕ್ಷ ಗೌಸ್‌ಸಾಬ್ ತಾಳಕೇರಿ, ಜಿಪಂ ಉಪಕಾರ್ಯದರ್ಸಿ ಮಲ್ಲಯ್ಯ ತೊದಲಬಾಗಿ, ತಹಸೀಲ್ದಾರ್ ಮಂಜುನಾಥ ಭೋಗಾವತಿ, ತಾಪಂ ಇಒ ಲಕ್ಷ್ಮೀದೇವಿ ಯಾದವ್, ಸಹಾಯಕ ನಿರ್ದೇಶಕ ಮಹಾಂತಗೌಡ ಪಾಟೀಲ್, ಯೋಜನೆ ನೋಡಲ್ ಅಧಿಕಾರಿ ಸುರೇಶ ಕೋರೆ, ಸಿಡಿಪಿಒ ರೋಹಿಣಿ ಕೋಟಗಾರ್, ಪಿಡಿಒ ಕಾಶೀನಾಥ ಇದ್ದರು. ಶಿಕ್ಷಕಿ ಕೆ.ಉಮಾದೇವಿ ನಿರ್ವಹಿಸಿದರು. 18 ಗ್ರಾಪಂ ವ್ಯಾಪ್ತಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net