

ಮುಂಡರಗಿ: ಪಟ್ಟಣದ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದಲ್ಲಿ ಭಾನುವಾರ ತಾಲೂಕು ರಡ್ಡಿ ಸಮಾಜ ಶೈಕ್ಷಣಿಕ ಹಾಗೂ ಸಮಾಜ ಸೇವಾ ಟ್ರಸ್ಟ್ ಕಮಿಟಿ ವತಿಯಿಂದ ಶಾಸಕರಾದ ಜಿ.ಎಸ್.ಪಾಟೀಲ ಹಾಗೂ ಡಾ.ಚಂದ್ರು ಲಮಾಣಿ ಅವರನ್ನು ಸನ್ಮಾನಿಸಲಾಯಿತು.
ದೇವಸ್ಥಾನದಲ್ಲಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮನವರ ದರ್ಶನ ಪಡೆದ ಶಾಸಕರು ಸಮುದಾಯ ಭವನದ ಕಾಮಗಾರಿ ವೀಕ್ಷಿಸಿದರು. ಇದೇ ಸಂದರ್ಭದಲ್ಲಿ ಹಿರೇವಡ್ಡಟ್ಟಿ ಗ್ರಾ.ಪಂ. ನೂತನ ಉಪಾಧ್ಯಕ್ಷ ಹನುಮರಡ್ಡಿ ಮೇಟಿ, ಡಿಡಿಪಿಐ ಎಂ.ಎ.ರಡ್ಡೇರ ಅವರನ್ನು ಸನ್ಮಾನಿಸಲಾಯಿತು.
ತಾಲೂಕು ರಡ್ಡಿ ಸಮಾಜದ ಅಧ್ಯಕ್ಷ ಡಾ.ಬಿ.ಎಸ್.ಮೇಟಿ, ಅಂದಪ್ಪ ಮೇಟಿ, ಡಾ.ವೈ.ಎಸ್.ಮೇಟಿ, ವೀರಣ್ಣ ಮೇಟಿ, ಉಮೇಶ ಮೇಟಿ, ಹೇಮಂತಗೌಡ ಪಾಟೀಲ, ಶರಣಪ್ಪ ಚೆನ್ನಳ್ಳಿ, ವಿಶ್ವನಾಥ ಪಾಟೀಲ, ಯರಾಶಿ, ಶಿವಾನಂದ ಚಾಕಲಬ್ಬಿ, ಸುಭಾಸ ಹಳ್ಳಿಗುಡಿ, ಹನುಮಂತಪ್ಪ ಗಡ್ಡರ, ಬಾಬಣ್ಣ ಚನ್ನಳ್ಳಿ, ಸುರೇಶ ಒಕ್ಕಳದ, ಮಂಜುನಾಥ ಶಿರೋಳ, ಸುರೇಶ ಅಬ್ಬಿಗೇರಿ, ಅಶೋಕ ಕಬ್ಬೇರಹಳ್ಳಿ, ಅಜ್ಜಪ್ಪ ಗಡ್ಡದ, ಶೇಖಣ್ಣ ಬಾಲೇಹೊಸೂರ, ರವಿ ಮುರುಡಿ, ಚನ್ನಪ್ಪ ತಾಮ್ರಗುಂಡಿ ಇತರರು ಇದ್ದರು.