ಸಾರಿಗೆ ಬಸ್ ಸಂಚಾರಕ್ಕೆ ಶಾಸಕ ಚಾಲನೆ

ಕುಶಾಲನಗರ ಬಸ್ ನಿಲ್ದಾಣದಲ್ಲಿ ನೂತನ ಸಾರಿಗೆ ಬಸ್ ಸೇವೆಗೆ ಶಾಸಕ ಡಾ.ಮಂತರ್‌ಗೌಡ ಚಾಲನೆ ನೀಡಿದರು. ಶಶಿಧರ್, ನಟೇಶ್ ಗೌಡ, ವಿಜಯ ಇದ್ದರು.
ಕುಶಾಲನಗರ ಬಸ್ ನಿಲ್ದಾಣದಲ್ಲಿ ನೂತನ ಸಾರಿಗೆ ಬಸ್ ಸೇವೆಗೆ ಶಾಸಕ ಡಾ.ಮಂತರ್‌ಗೌಡ ಚಾಲನೆ ನೀಡಿದರು. ಶಶಿಧರ್, ನಟೇಶ್ ಗೌಡ, ವಿಜಯ ಇದ್ದರು.
Published on

ಕುಶಾಲನಗರ: ಕುಶಾಲನಗರ- ಸೋಮವಾರಪೇಟೆ ನಡುವಿನ ಸಾರಿಗೆ ಬಸ್ ಸಂಚಾರಕ್ಕೆ ಶಾಸಕ ಡಾ.ಮಂತರ್ ಗೌಡ ಮಂಗಳವಾರ ಇಲ್ಲಿನ ಬಸ್ ನಿಲ್ದಾಣದಲ್ಲಿ ಚಾಲನೆ ನೀಡಿದರು.

ಇಲ್ಲಿನ ಬಸ್ ನಿಲ್ದಾಣದಿಂದ ಬೆಳಗ್ಗೆ 7.45ಕ್ಕೆ ಹೊರಟು ಸೀಗೆಹೊಸೂರು, ಏಳಕನೂರುಹೊಸಳ್ಳಿ, ಅಬ್ಬೂರುಕಟ್ಟೆ ಮಾರ್ಗವಾಗಿ ಸೋಮವಾರಪೇಟೆ ತಲುಪಲಿದೆ.

ಈ ವ್ಯಾಪ್ತಿಯ ಗ್ರಾಮಸ್ಥರು, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ನೂತನ ಬಸ್ ಸೇವೆಯಿಂದ ಅನೂಕೂಲವಾಗಲಿದೆ. ಆ ಮೂಲಕ ಬಹುಕಾಲದ ಬೇಡಿಕೆ ಈಡೇರಿದಂತಾಗಿದೆ ಎಂದು ಮಂತರ್ ಗೌಡ ತಿಳಿಸಿದರು.

ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ವಿ.ಪಿ.ಶಶಿಧರ್, ಪ್ರಮುಖರಾದ ನಟೇಶ್‌ಗೌಡ, ಸ್ಧಳೀಯ ಮುಖಂಡ ವಿ.ಎಂ.ವಿಜಯ ಸೇರಿದಂತೆ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net