

ಮಂಡ್ಯ: ನಗರದ ಸಮಗ್ರ ಅಭಿವೃದ್ದಿಯನ್ನು ಹಂತ ಹಂತವಾಗಿ ಕೈಗೆತ್ತಿಕೊಳ್ಳಲಾಗುವುದು ಎಂದು ಶಾಸಕ ರವಿಕುಮಾರ್ ಗಣಿಗ ಹೇಳಿದರು.
ನಗರದ ಕೆರೆಯಂಗಳದಲ್ಲಿ ಬೀಡಿ ಕಾರ್ಮಿಕರ ಬಡಾವಣೆಯಲ್ಲಿ ನಗರಸಭೆ ಯೋಜನೆಯಡಿ 5 ಲಕ್ಷ ರೂ ವೆಚ್ಚದಲ್ಲಿ ಚರಂಡಿ ಹೂಳು ತೆರವು ಹಾಗೂ ಡಕ್ ಮರುನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ನಗರದಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿಗಳು ನಡೆಯಬೇಕಿದೆ. ಹಂತ ಹಂತವಾಗಿ ಎಲ್ಲಾ ಕಾಮಗಾರಿಗಳನ್ನು ಸಕಾಲದಲ್ಲಿ ಮುಗಿಸಿ ಜನರಿಗೆ ಉತ್ತಮ ವಾತಾವರಣ ನೀಡುವುದು ನಮ್ಮ ಕರ್ತವ್ಯ ಎಂದು ನುಡಿದರು.
ನಗರಸಭೆ ಸದಸ್ಯರಾದ ಜಾಕೀರ್‌ಪಾಷಾ, ನಹೀಂ, ಇಂಜಿನಿಯರ್ ರವಿಕುಮಾರ್, ಮುಖಂಡ ಹೊಸಹಳ್ಳಿ ಶೇಖರ್ ಇತರರಿದ್ದರು.