ಹುಮನಾಬಾದ್ ಮಾರ್ಗದಿಂದ ರೈಲ್ವೆ ಸೌಲಭ್ಯ

Humnabad 1
Published on

ಹುಮನಾಬಾದ್: ಹುಮನಾಬಾದ್ ಮಾರ್ಗವಾಗಿ ಬೆಂಗಳೂರಿಗೆ ರೈಲ್ವೆ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ ಗಮನಕ್ಕೆ ತಂದಿರುವೆ. ಈ ಬೇಡಿಕೆ ಶೀಘ್ರ ಈಡೇರಲಿದೆ ಎಂದು ಶಾಸಕ ಡಾ.ಸಿದ್ದು ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದರು.
ಬೆಂಗಳೂರು ರೈಲು ಹುಮನಾಬಾದ್ ಮಾರ್ಗವಾಗಿ ಹೋದರೆ ಈ ಭಾಗದ ಜನರಿಗೆ ಬಹಳಷ್ಟು ಅನುಕೂಲವಾಗಲಿದೆ. ಸಚಿವರ ಗಮನಕ್ಕೆ ತಂದಿದ್ದು ಕ್ರಮ ವಹಿಸುವುದಾಗಿ ತಿಳಿಸಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಚುನಾವಣೆ ಪೂರ್ವದಲ್ಲಿ ಕ್ಷೇತ್ರದ ಜನರಿಗೆ ನೀಡಿರುವ ಭರವಸೆಯಂತೆ ಕೆಲಸ ಮಾಡುತ್ತಿರುವೆ. ಪಟ್ಟಣದ ಹೊರವಲಯದಲ್ಲಿರುವ ಕೈಗಾರಿಕೆ ಪ್ರದೇಶಗಳ ಕೆಮಿಕಲ್ ಕಾರ್ಖಾನೆಗಳಿಂದ ಉಂಟಾಗುತ್ತಿದ್ದ ವಾಯು, ಜಲ ಮಾಲಿನ್ಯದಿಂದ ಹಲವು ವರ್ಷಗಳಿಂದ ಜನ ತೊಂದರೆ ಅನುಭವಿಸುತ್ತಿದ್ದರು. ಚುನಾವಣೆಯಲ್ಲಿ ಗೆದ್ದು ಬಂದರೆ ೯೦ ದಿನಗಳಲ್ಲಿ ಅಂಥ ಕಾರ್ಖಾನೆ ಮುಚ್ವಿಸುವುದಾಗಿ ಭರವಸೆ ನೀಡಿದ್ದೆ. ಅದರಂತೆ ಗೆದ್ದು ಬಂದ ನಂತರ ಪ್ರಥಮ ಅಧಿವೇಶನದಲ್ಲಿ ಧ್ವನಿ ಎತ್ತಿರುವೆ. ಇದರ ಪರಿಣಾಮ ೮ ಟೈರ್ ಪೈರೋಲಿಸಿಸ್ ಘಟಕ ಬಂದ್ ಮಾಡಲು ಸರ್ಕಾರ ಆದೇಶ ಮಾಡಿದೆ ಎಂದು ತಿಳಿಸಿದರು.
ಪಟ್ಟಣದ ವೀರಭದ್ರೇಶ್ವರ ದೇವಸ್ಥಾನಕ್ಕೆ ಸಹಾಯಕ ಆಯುಕ್ತರೊಂದಿಗೆ ಭೇಟಿ ನೀಡಿ ಪರಿಶೀಲನೆ ಮಾಡಿರುವೆ. ದೇವಸ್ಥಾನ ಅಭಿವÊದ್ಧಿಗೆ ಹಾಗೂ ಥೇರ ಮೈದಾನದಲ್ಲಿನ ಅಕ್ರಮ ಅಂಗಡಿಗಳ ಬಗ್ಗೆ ಪರಿಶೀಲಿಸಿ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿರುವೆ ಎಂದರು.
ಪಟ್ಟಣದ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಸೌಲಭ್ಯ ಒದಗಿಸುವಂತೆ ನಿರ್ದೇಶನ ನೀಡಿರುವೆ. ಹೊರವಲಯದಲ್ಲಿ ಹಾಗೂ ಚಿಟಗುಪ್ಪದಲ್ಲಿ ಸ್ಲಂ ಬೋರ್ಡ್ ವತಿಯಿಂದ ನಡೆಯುತ್ತಿರುವ ವಸತಿ ಕಾಮಗಾರಿ ಕಳಪೆಯಾಗಿರುವ ಬಗ್ಗೆ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಿರುವೆ. ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ (ಬಿಎಸ್‌ಎಸ್‌ಕೆ) ಆರಂಭಿಸಿ ರೈತರಿಗೆ ಹಾಗೂ ಕಾರ್ಮಿಕರಿಗೆ ಅನುಕೂಲ ಮಾಡಿಕೊಡುವಂತೆ ಸರ್ಕಾರದ ಗಮನಕ್ಕೆ ತರಲಾಗಿದೆ. ಈಗಾಗಲೇ ಕೇಂದ್ರ ಸರ್ಕಾರದ ಅಮÊತ ಯೋಜನೆಯಡಿ ಹುಮನಾಬಾದ್, ಚಿಟಗುಪ್ಪ, ಹಳ್ಳಿಖೇಡ್ (ಬಿ) ಪುರಸಭೆಗೆ ೧೭೫ ಕೋಟಿ ರೂ.ಮಂಜೂರಾಗಿದೆ ಎಂದರು.
ಬಿಜೆಪಿ ಮಂಡಲ ಅಧ್ಯP್ಷÀ ಪ್ರಭಾಕರ ನಾಗರಾಳೆ ಮಾತನಾಡಿದರು. ಪ್ರಮುಖರಾದ ಮಲ್ಲಿಕಾರ್ಜುನ ಸೀಗಿ, ಸಂತೋಷ ಪಾಟೀಲ್, ಗಿರೀಶ ತುಂಬಾ, ರಾಜು ಭಂಡಾರಿ, ನಾಗಭೂಷಣ ಸಂಗಮ್ ಮತ್ತಿತರರು ಇದ್ದರು.
ನಮನ: ಪುಣ್ಯಸ್ಮರಣೆ ನಿಮಿತ್ಯ ಪಟ್ಟಣದಲ್ಲಿರುವ ಮಾಜಿ ಸಚಿವ ದಿ.ಬಸವರಾಜ ಪಾಟೀಲ್ ಅವರ ಸಮಾಧಿ ಸ್ಥಳಕ್ಕೆ ಶಾಸಕ ಡಾ.ಸಿದ್ದು ಪಾಟೀಲ್ ಭೇಟಿ ನೀಡಿ ನಮಿಸಿದರು. ಪ್ರಮುಖರಾದ ಸುನೀಲ ಪಾಟೀಲ್, ಭದ್ರೇಶ ಪಾಟೀಲ್, ಮಲ್ಲಿಕಾರ್ಜುನ ಸಿಗಿ, ಶ್ರೀನಾಥ ದೇವಣಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net