

ಹುಮನಾಬಾದ್: ಮಳೆಯಿಂದ ಹಾನಿಯಾದ ಮನೆ ಹಾಗೂ ಕಾರಂಜಾ ಜಲಾಶಯ ಒಳಹರಿವು ನೀರಿನಿಂದ ಗ್ರಾಮದ ರೈತರ ಜಮೀನಿನಲ್ಲಿ ಆದ ಬೆಳೆ ಹಾನಿ, ರಸ್ತೆ, ವಿದ್ಯುತ್ ಸೇರಿ ಇನ್ನಿತರ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದು ಆದಷ್ಟು ಬೇಗನೆ ಇತ್ಯರ್ಥಗೊಳಿಸಲಾಗುವುದು ಎಂದು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಭರವಸೆ ನೀಡಿದರು.
ಡಾಕುಳಗಿ ಗ್ರಾಮಕ್ಕೆ ಮಂಗಳವಾರ ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಸಂಚರಿಸಿ ಮಳೆಯಿಂದ ಹಾನಿಯಾಗಿರುವ ಬಗ್ಗೆ ಪರಿಶೀಲಿಸಿದರು.
ಗ್ರಾಪಂ ಅಧ್ಯಕ್ಷ ಶಾಧೀರ್ ಮಿಯ್ಯಾ, ಸದಸ್ಯ ಶೆಟ್ಟಿ ಅತಿವಾಳ, ತಾಲೂಕು ದಂಡಾಧಿಕಾರಿ ಅಂಜುಂ ತಬಸ್ಸುಮ್, ತಾಪಂ ಇಒ ದೀಪಿಕಾ ನಾಯ್ಕರ್, ಕಾರಂಜಾ ಜಲಾನಯನ ಯೋಜನೆ ಸಹಾಯಕ ಅಭಿಯಂತರ ವಿಘ್ನೇಷ, ತಾಲೂಕು ಪಶುಸಂಗೋಪನೆ ಅಧಿಕಾರಿ ಡಾ.ಗೋವಿಂದ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ರಮೇಶಕುಮಾರ, ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ, ಪ್ರಮುಖರಾದ ಸಂತೋಷ ಪಾಟೀಲ್, ಮಂಡಲ ಅಧ್ಯಕ್ಷ ಅನಿಲ ಪಸಾರ್ಗಿ, ನಾಗಭೂಷಣ ಸಂಗಮ, ಗ್ರಾಮದ ಮುಖಂಡರಾದ ಸೂರ್ಯಕಾಂತ ಪಾಟೀಲ್, ಅಪ್ಪಾರಾವ ಡಾಕುಳಗಿ, ಮಹೇಶ ರೆಡ್ಡಿ, ಸಂತೋಷ ಸೋನಿ, ದೇವರಾಜ ಅಣದೂರ, ವಿದ್ಯಾಸಾಗರ ಡಾಕುಳಗಿ ಇತರರಿದ್ದರು.