ಗಡಿಗ್ರಾಮದ ರಸ್ತೆ ಅಭಿವೃದ್ಧಿಗೆ ಆದ್ಯತೆ

Untitled design (24)
Published on

ಕಾನಹೊಸಹಳ್ಳಿ: ಕ್ಷೇತ್ರದ ಗಡಿಭಾಗದ ರಸ್ತೆಗಳು ಹದಗೆಟ್ಟಿದ್ದು, ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಹೇಳಿದರು.

ಸಮೀಪದ ಹುಡೇಂ ಗ್ರಾಮದಲ್ಲಿ ತಾಯಕನಹಳ್ಳಿಯಿಂದ ಹುಡೇಂವರೆಗೆ ಕಕ ಪ್ರದೇಶ ಅಭಿವೃದ್ಧಿ ಮಂಡಳಿಯ 8.7 ಕೋಟಿ ರೂ.ವೆಚ್ಚದ ರಸ್ತೆ ಅಗಲೀಕರಣ ಹಾಗೂ ಅಭಿವೃದ್ಧಿ ಕಾಮಗಾರಿಗೆ ಶುಕ್ರವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಕ್ಷೇತ್ರ ವ್ಯಾಪ್ತಿಯಲ್ಲಿ 3 ದಿನದಲ್ಲಿ 30 ಕೋಟಿ ರೂ.ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಆಸ್ಪತ್ರೆಗಳ ಉನ್ನತೀಕರಣ ಹಾಗೂ ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆ. ಶಾಲಾ ಕೊಠಡಿಗಳ ನಿರ್ಮಾಣ, ಶುದ್ಧ ಕುಡಿವ ನೀರಿನ ಘಟಕ ಹಾಗೂ ಸಾಕಷ್ಟು ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡಲಾಗಿದೆ. ಕ್ಷೇತ್ರ ತೀರಾ ಹಿಂದುಳಿದ ಪ್ರದೇಶವಾಗಿದ್ದು, ಅಭಿವೃದ್ಧಿಯೊಂದೇ ನನ್ನ ಗುರಿ ಎಂದರು.

ಗ್ರಾಪಂ ಉಪಾಧ್ಯಕ್ಷೆ ಪ್ಯಾರಿಮಾಬೀ ಗನಿಸಾಬ್, ಗುತ್ತಿಗೆದಾರ ಗುಂಡುಮುಣುಗು ಎಸ್.ಪಿ.ಪ್ರಕಾಶ್, ಪಿಡಬ್ಲುೃಡಿ ಎಇಇ ಕೆ.ನಾಗನಗೌಡ, ಗ್ರಾಪಂ ಪಿಡಿಒ ಲಕ್ಷ್ಮೀಬಾಯಿ, ಗ್ರಂಥಾಲಯ ಮೇಲ್ವಿಚಾರಕ ತುಡುಮ ಗುರುರಾಜ್, ಪ್ರಮುಖರಾದ ಕೆ.ಮೂರ್ತೆಪ್ಪ, ರಾಮಚಂದ್ರಪ್ಪ, ಬೋಸೆಮಲ್ಲಯ್ಯ, ಬಗ್ಗಲರ ಪಾಪಣ್ಣ, ಗುಡ್ಡದ ಬೋಸಯ್ಯ, ಅಜ್ಜಣ್ಣ, ಯಲ್ಲಪ್ಪ, ನಾಗಮಣಿ ಜಿಂಕಲ್, ಪಾಲಯ್ಯ, ಜಿ.ಓಬಣ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net