

ಲಕ್ಷ್ಮೇಶ್ವರ: ಪಟ್ಟಣದಲ್ಲಿರುವ ಪಶು ಆಸ್ಪತ್ರೆಯಲ್ಲಿ ಆಂಬ್ಯುಲೆನ್ಸ್ ಸೇವೆಗೆ ಶಾಸಕ ಡಾ. ಚಂದ್ರು ಲಮಾಣಿ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ರಾಜ್ಯಾದ್ಯಂತ ಪಶುವೈದ್ಯರ ಕೊರತೆಯಿದ್ದು, ಸಂಚಾರಿ ವಾಹನದ ಸೇವೆ ರೈತರಿಗೆ ಅನುಕೂಲವಾಗಲಿದೆ ಎಂದರು.
ಪಶು ವೈದ್ಯಾಧಿಕಾರಿ ಡಾ. ನೀಲಕಂಠ ಹವಳದ ಮಾಹಿತಿ ನೀಡಿ, ಈ ವಾಹನದ ಸೇವೆಗಾಗಿ ಪ್ರತ್ಯೇಕ ಕಾಲ್ ಸೆಂಟರ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ರೈತರು 1962 ಉಚಿತ ಸಹಾಯವಾಣಿಗೆ ಕರೆ ಮಾಡಿದ ತಕ್ಷಣ ಆಂಬ್ಯುಲೆನ್ಸ್ ಮನೆ ಬಾಗಿಲಿಗೆ ತೆರಳಿ ಅವಶ್ಯಕ ಸೇವೆಗಳನ್ನು ನೀಡಲಿದೆ. ಇದರಲ್ಲಿ ಒಬ್ಬರು ಪಶುವೈದ್ಯ, ಸಹಾಯಕರು, ಚಾಲಕರು ಇರುತ್ತಾರೆ. ರೈತರು ಇದರ ಲಾಭ ಪಡೆದುಕೊಳ್ಳಬೇಕು ಎಂದರು.
ಪಶುವೈದ್ಯ ಡಾ. ವೇದವತಿ ಯಲಗಚ್ಚಿ, ನಿವೃತ್ತ ಪಶುವೈದ್ಯ ಬಿ.ಆರ್. ನಾಗಸಮುದ್ರ, ರೈತ ಮುಖಂಡ ಟಾಕಪ್ಪ ಸಾತಪುತೆ, ಗಂಗಾಧರ ಮೆಣಸಿನಕಾಯಿ, ನಿಂಗಪ್ಪ ಬನ್ನಿ, ದುಂಡೇಶ ಕೊಟಗಿ, ಶಿವಯೋಗಿ ಅಂಕಲಕೋಟಿ, ರಮೇಶ ಹಾಳದೋಟದ, ರುದ್ರಪ್ಪ ಉಮಚಗಿ, ಮಹೇಶ ಕಲಘಟಗಿ. ಉಳುವೇಶಗೌಡ ಪಾಟೀಲ, ಬಸವರಾಜ ಕಲ್ಲೂರ, ಮಂಜುನಾಥ ಹೊಗಸೊಪ್ಪಿನ, ಅನಿಲ ಮುಳಗುಂದ, ಮಂಜುನಾಥ ಗಜಾಕೋಶ, ರುದ್ರಪ್ಪ ನರೇಗಲ್, ಆಕಾಶ ಸೌದತ್ತಿ, ಅಭಯ್ ಜೈನ, ವಿನಯ ಪಾಟೀ, ರವಿ ಕೋರಿ, ವಿನಾಯಕ ಸುಣಗಾರ, ಸಿಬ್ಬಂದಿ ಚಿದಾನಂದ ಮಾಚೇನಹಳ್ಳಿ, ಮಲ್ಲಿಕಾರ್ಜುನ ಸೂರಣಗಿ, ಇತರರಿದ್ದರು.