ಹಬ್ಬಕ್ಕೆ ಮರೆಯಲಾಗದ ಉಡುಗೊರೆ: ಹಕ್ಕುಪತ್ರ ವಿತರಿಸಿದ ಶಾಸಕ ರವಿಕುಮಾರ್ ಗಣಿಗ

MLA distributes title deeds for the site Mandya
Published on

ಮಂಡ್ಯ: ಶಿವರಾತ್ರಿ ಹಬ್ಬದ ದಿನವಾದ ಬುಧವಾರ ತಾಲೂಕಿನ ಚಿಕ್ಕಮಂಡ್ಯ ಗ್ರಾಮದಲ್ಲಿ ಲಾನುಭವಿಗಳಿಗೆ ಶಾಸಕ ರವಿಕುಮಾರ್ ಗಣಿಗ ಹಕ್ಕುಪತ್ರ ವಿತರಿಸಿದರು. ಜಿಲ್ಲಾಡಳಿತ, ತಾಲೂಕು ಆಡಳಿತದಿಂದ ಆಯೋಜಿಸಿದ್ದ ಸಮಾರಂಭದಲ್ಲಿ ಮಂಡ್ಯ ಗ್ರಾಮಾಂತರ ಗ್ರಾಮ ಪಂಚಾಯಿತಿ ವ್ಯಾಪ್ತಿಯ 23 ಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಮಾಡಲಾಯಿತು. ಹಲವು ವರ್ಷದಿಂದ ಕಾದುಕುಳಿತ್ತಿದ್ದ ಲಾನುಭವಿಗಳಿಗೆ ವಿಶೇಷ ಉಡುಗೊರೆ ಸಿಕ್ಕಂತಾಯಿತು.

ಶಾಸಕ ರವಿಕುಮಾರ್ ಗಣಿಗ ಮಾತನಾಡಿ, ಶಿವರಾತ್ರಿ ಹಬ್ಬ ವಿಶೇಷ ದಿನ. ಇಂತಹ ಸಂದರ್ಭದಲ್ಲಿ ನಿವೇಶನದ ಹಕ್ಕುಪತ್ರ ವಿತರಣೆ ಮಾಡಲಾಗುತ್ತಿದೆ. ಮುಖ್ಯಮಂತ್ರಿಗಳ ಗ್ರಾಮೀಣ ನಿವೇಶನ ಯೋಜನೆಯಡಿ ಅರ್ಹರಿಗೆ ಹಕ್ಕುಪತ್ರ ನೀಡಲಾಗಿದೆ. ಈಗಾಗಲೇ ಬೇರೆ ಗ್ರಾಮ ಹಾಗೂ ಮಂಡ್ಯ ನಗರದಲ್ಲಿಯೂ ಹಕ್ಕುಪತ್ರ ಕೊಡಲಾಗಿದೆ. ಇದಲ್ಲದೆ ಜನರಿಗೆ ಅನುಕೂಲವಾಗಲೆಂದು ನಮ್ಮ ಸರ್ಕಾರ ಗ್ಯಾರಂಟಿ ಯೋಜನೆ ಅನುಷ್ಠಾನಗೊಳಿಸಲಾಗಿದೆ ಎಂದರು.

ತಹಸೀಲ್ದಾರ್ ಡಾ.ಶಿವಕುಮಾರ್ ಬಿರಾದರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net