ವಿವಾದದ ಸುಳಿಯಲ್ಲಿ ಶಾಸಕ ಶ್ರೀನಿವಾಸ್

mahimapura (1)
MLA dispute
Published on

ಚುನಾವಣಾ ನೀತಿ ಸಂಹಿತೆಗೆ ಡೋಂಟ್‌ಕೇರ್

ಜಾಲತಾಣದಲ್ಲಿನ ಪೋಸ್ಟರ್‌ಗಳಿಗೆ ಜನರ ಆಕ್ರೋಶ


ವಿಜಯವಾಣಿ ಸುದ್ದಿಜಾಲ ತ್ಯಾಮಗೊಂಡ್ಲು
ಒಂದಿಲ್ಲೊಂದು ವಿವಾದವನ್ನು ಮೈಮೇಲೆ ಎಳೆದುಕೊಳ್ಳುವ ಮೂಲಕ ಸದಾ ಸುದ್ದಿಯಲ್ಲಿರುವ ನೆಲಮಂಗಲ ಶಾಸಕ ಎನ್.ಶ್ರೀನಿವಾಸ್ ಚುನಾವಣಾ ನೀತಿ ಸಂಹಿತೆ ಉಲ್ಲಂಸುವ ಮೂಲಕ ಮತ್ತೊಂದು ವಿವಾದ ಸೃಷ್ಟಿಸಿದ್ದಾರೆ.
ತ್ಯಾಮಗೊಂಡ್ಲು ಹೋಬಳಿಯ ಮಹಿಮಾಪುರದಲ್ಲಿ ನಡೆಯುತ್ತಿರುವ ದನಗಳ ಜಾತ್ರೆಯಲ್ಲಿ ರೈತರಿಗೆ ದಾಸೋಹದ ನೆಪದಲ್ಲಿ ನೆಲಮಂಗಲ ಶಾಸಕರು ದೊಡ್ಡ ದೊಡ್ಡ ಭಾವಚಿತ್ರ ಬಳಸಿ ಫ್ಲೆಕ್ಸ್ ಹಾಕಿಸಿಕೊಂಡಿದ್ದಾರೆ. ಶಿಕ್ಷಕರ ಚುನಾವಣೆ ನೀತಿ ಸಂಹಿತೆಯಿದ್ದರೂ ಡೋಂಟ್‌ಕೇರ್ ಎನ್ನುತ್ತಿರುವ ಶಾಸಕರ ನಡೆಗೆ ತಾಲೂಕಿನಲ್ಲಿ ಸಾರ್ವಜನಿಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
ಜಾಲತಾಣದಲ್ಲಿ ಪೋಸ್! ದನಗಳ ಜಾತ್ರೆಯಲ್ಲಿ ದಾಸೋಹದ ಹೆಸರಿನಲ್ಲಿ ಹಾಕಿರುವ ಬೃಹತ್ ಪ್ಲೆಕ್ಸ್‌ಗಳನ್ನು ಖುದ್ದು ಶಾಸಕರೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ ಪೋಸ್ ಕೊಡುತ್ತಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಲು ಆಡಳಿತ ಪಕ್ಷದ ಶಾಸಕರಿಗೆ ರಿಯಾಯಿತಿ ನೀಡಲಾಗಿದೆಯೇ ಎಂದು ಜನರು ವ್ಯಂಗ್ಯವಾಡುತ್ತಿರುವುದಲ್ಲದೇ ಜಾಲತಾಣಗಳಲ್ಲಿ ವಿರೋಧದ ಪೋಸ್ಟ್‌ಗಳನ್ನು ಹರಿಬಿಡುತ್ತಿದ್ದಾರೆ.
ಅಧಿಕಾರಿಗಳು ಜಾಣಮೌನ: ನೆಲಮಂಗಲ ತಾಲೂಕಿನ ಆಯಕಟ್ಟಿನ ಜಾಗದಲ್ಲಿರುವ ಹಿರಿಯ ಅಧಿಕಾರಿಗಳು ಶಾಸಕರ ಆಣತಿಯಂತೆ ನಡೆಯುತ್ತಿದ್ದಾರೆ ಎಂಬ ಆರೋಪ ಈ ಹಿಂದಿನಿಂದಲೂ ಕೇಳಿಬರುತ್ತಿದೆ. ನಿನ್ನೆಯಷ್ಟೇ ಮಾಜಿ ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಸುದ್ದಿಗೋಷ್ಠಿ ನಡೆಸಿ ಶಾಸಕರು ಅಧಿಕಾರಿಗಳನ್ನು ಕೈಗೊಂಬೆಯಂತೆ ನಡೆಸಿಕೊಳ್ಳುತ್ತಿದ್ದಾರೆ ಎಂದು ದೂರಿದ್ದರು. ಇದಕ್ಕೆಲ್ಲ ಈ ಪ್ಲೆಕ್ಸ್ ರಾಜಕೀಯ ಪುರಾವೆ ಒದಗಿಸಿದಂತಿದೆ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ.

ನೀತಿ ಸಂಹಿತೆ ಭಕ್ತರಿಗೆ ಮಾತ್ರ ಅನ್ವಯ! ಜ.22 ರಂದು ನಡೆದ ರಾಮಲಲ್ಲಾ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದ ಅಂಗವಾಗಿ ದೇಶಾದ್ಯಂತ ನಡೆದ ಕಾರ್ಯಕ್ರಮಗಳಲ್ಲಿ ಪ್ರಭು ಶ್ರೀರಾಮಚಂದ್ರನ ಭಾವಚಿತ್ರದ ಪ್ಲೆಕ್ಸ್, ಬ್ಯಾನರ್‌ಗಳು ಎಲ್ಲೆಡೆ ರಾರಾಜಿಸಿದ್ದವು. ಅದೇ ರೀತಿ ತಾಲೂಕಿನ ಪ್ರತಿ ಗ್ರಾಮಗಳಲ್ಲೂ ್ಲೆಕ್ಸ್ ಬ್ಯಾನರ್‌ಗಳು ತಲೆಎತ್ತಿದ್ದವು.
23ರಂದು ಕಾರ್ಯಕ್ರಮದ ಮುಖಂಡರನ್ನು ಠಾಣೆಗಳಿಗೆ ಕರೆಸಿದ ಪೋಲೀಸರು ಫ್ಲೆಕ್ಸ್‌ಗಳನ್ನು ತೆರವು ಮಾಡಲು ಸೂಚಿಸಿ ಕೂಡಲೇ ಕಾರ್ಯೋನ್ಮುಖರಾಗಿ ತೆರವು ಮಾಡಿಸುವಲ್ಲೂ ಯಶಸ್ವಿಯಾದರು. ಭಕ್ತರು ಹಾಗೂ ಕಾರ್ಯಕರ್ತರು ಒಂದು ದಿನ ಅವಕಾಶ ನೀಡಲು ಕೋರಿದರೂ ಚುನಾವಣಾ ನೀತಿ ಸಂಹಿತೆ ಹಾಗೂ ಜಿಲ್ಲಾಧಿಕಾರಿ ಆದೇಶ ಎಂದು ಹೇಳಿ ಅವಕಾಶ ನಿರಾಕರಿಸಲಾಯಿತು. ಆದರೆ ಜಾತ್ರೆಯಲ್ಲಿ ದೊಡ್ಡ ಬ್ಯಾನರ್, ಪ್ಲೆಕ್ಸ್ ರಾರಾಜಿಸುತ್ತಿದ್ದರೂ ಅಧಿಕಾರಿಗಳು ಜಾಣಮೌನ ಪ್ರದರ್ಶಿಸುತ್ತಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆಗೆ ಎಡೆಮಾಡಿಕೊಟ್ಟಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net