ವಾಮಮಾರ್ಗದಿಂದ ಸಿಎಂಗೆ ನೋಟಿಸ್, ರಾಜ್ಯಪಾಲರ ನಡೆಗೆ ಶಾಸಕ ದೇಶಪಾಂಡೆ ಗರಂ

R V DESHPANDE
Published on

ದಾಂಡೇಲಿ: ಪ್ರಜಾಪ್ರಭುತ್ವ ರೀತಿಯಲ್ಲಿ, ಸಂವಿಧಾನ ಮಾರ್ಗದಲ್ಲಿ ರಾಜ್ಯ ಸರ್ಕಾರದ ಆಡಳಿತವನ್ನು ಅಸ್ಥಿರಗೊಳಿಸಲು ಸಾಧ್ಯವಾಗುತ್ತಿಲ್ಲ ಎಂಬುದನ್ನು ಅರಿತಿರುವ ರಾಜ್ಯಪಾಲರು, ವಾಮ ಮಾರ್ಗದಿಂದ ಮುಖ್ಯಮಂತ್ರಿ ವಿರುದ್ಧ ನೋಟಿಸ್ ನೀಡಿರುವುದು ಖಂಡನೀಯ ಎಂದು ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ 50 ವರ್ಷದ ರಾಜಕೀಯ ಇತಿಹಾಸದಲ್ಲಿ ಕರ್ನಾಟಕ ರಾಜ್ಯದ ಯಾವುದೇ ರಾಜ್ಯಪಾಲರು ರಾಜ್ಯದಲ್ಲಿ ಈ ರೀತಿಯ ಕ್ರಮ ಕೈಕೊಂಡ ಬಗ್ಗೆ ನನಗೆ ತಿಳಿದಿಲ್ಲ. ರಾಜಕೀಯ ಜೀವನದಲ್ಲಿ ಒಂದು ಕಪ್ಪು ಚುಕ್ಕೆ ಇಲ್ಲದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಿನಾಕಾರಣ ನೋಟಿಸ್ ನೀಡಿರುವುದು ಕಾನೂನು ಹಾಗೂ ಸಂವಿಧಾನದ ವಿರುದ್ಧವಾಗಿದೆ ಎಂದರು.ಸ
ಈ ಕುರಿತು ರಾಜ್ಯಪಾಲರು ತಮ್ಮ ಆದೇಶ ಹಿಂಪಡೆಯಬೇಕು. ಇಲ್ಲದಿದ್ದರೆ ಸಂವಿಧಾನ ಹಾಗೂ ಕಾನೂನಿನ ಚೌಕಟ್ಟಿನಲ್ಲಿ ರಾಜ್ಯಪಾಲರ ಈ ಆದೇಶದ ವಿರುದ್ಧ ಹೋರಾಟ ಮುಂದುವರಿಸುವದಾಗಿ ತಿಳಿಸಿದರು.
ಕಾಂಗ್ರೆಸ್ ಘಟಕದ ಅಧ್ಯಕ್ಷ ಮೋಹನ ಹಲವಾಯಿ, ಕಾರ್ಯದರ್ಶಿ ಎಸ್.ಎಸ್. ಪೂಜಾರ, ಪಕ್ಷದ ಮುಖಂಡರಾದ ಇಕ್ಬಾಲ ಶೇಖ, ಮುನ್ನಾ ವಹಾಬ್, ಆರ್.ಪಿ. ನಾಯ್ಕ, ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net