ಕಾಲು ಕತ್ತರಿಸಿ ಬಿಡ್ತೀನಿ ಹುಷಾರ್​​; ವಾರ್ಡನ್​ಗೆ ಶಾಸಕ Darshan ಫುಲ್​ ಕ್ಲಾಸ್​, ವಿಡಿಯೋ ವೈರಲ್​

MLA Darshan
Published on

ಮಂಡ್ಯ: ಮೇಲುಕೋಟೆ ಕ್ಷೇತ್ರ ವ್ಯಾಪ್ತಿಗೆ ಬರುವ ಕೆರೆತಣ್ಣೂರಲ್ಲಿರುವ ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಶಾಸಕ ದರ್ಶನ್​ ಪುಟ್ಟಣ್ಣಯ್ಯ (Darshan Puttanaiah) ದಿಢೀರ್​ ಭೇಟಿ ನೀಡಿದ್ದು, ಅಲ್ಲಿನ ಅವ್ಯವಸ್ಥೆ ಕಂಡು ಕೆಂಡಾಮಂಡಲರಾಗಿದ್ದು, ವಾರ್ಡನ್​ ಹಾಗೂ ಅಲ್ಲಿನ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಪಾಂಡವಪುರ ತಾಲ್ಲೂಕಿನ ಕೆರೆತಣ್ಣೂರಲ್ಲಿರುವ ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ದಿಢೀರ್​ ಭೇಟಿ ನೀಡಿದ ಶಾಸಕ ದರ್ಶನ್​ ಪುಟ್ಟಣ್ಣಯ್ಯ (Darshan Puttanaiah)​ ವಾರ್ಡನ್​ ಇಲ್ಲದಿರುವುದನ್ನು ಕಂಡು ಕೆಂಡಾಂಡಲರಾಗಿದ್ದಾರೆ. ವಾರ್ಡನ್​ ಬದಲು ಆತನ ತಾಯಿ ಅಲ್ಲಿ ಕಾರ್ಯನಿರ್ವಹಿಸುತ್ತಿದ್ದುದ್ದನ್ನು ಗಮನಿಸಿದ ಶಾಸಕರು ಕರೆ ಮಾಡಿ ಕ್ಲಾಸ್​ ತೆಗೆದುಕೊಂಡಿದ್ದಾರೆ.

ಮಕ್ಕಳಿಗೆ ಸರಿಯಾಗಿ ಊಟ ಹಾಕುವುದಿಲ್ಲ, ವಾರ್ಡನ್​ ಅರುಣ್​ ಹಾಸ್ಟೆಲ್​ನಲ್ಲಿ ಇರುವುದಿಲ್ಲ. ಆತನ ಬದಲು ಅವರ ತಾಯಿ ಇಲ್ಲಿ ಕೆಲಸ ಮಾಡುತ್ತಾರೆ. ಅವರು ನಮಗೆ ಬಾಯಿಗೆ ಬಂದಂತೆ ಬೈಯುತ್ತಾರೆ. ಅವ್ಯವಸ್ಥೆಗಳೆ ಹೆಚ್ಚು ಎಂದು ವಿದ್ಯಾರ್ಥಿಗಳು ಶಾಸಕರ ಗಮನಕ್ಕೆ ತಂದಿದ್ದಾರೆ. ವಿದ್ಯಾರ್ಥಿಗಳ ದೂರನ್ನು ಆಲಿಸಿ ಕೆರಳಿ ಕೆಂಡಾವದ ಶಾಸಕ ದರ್ಶನ್​ ವಾರ್ಡನ್​ ಅರುಣ್​ಗೆ ಕರೆ ಮಾಡಿ ಸಖತ್​ ಕ್ಲಾಸ್​ ತೆಗೆದುಕೊಂಡಿದ್ದಾರೆ.

ವಾರ್ಡನ್​ ಆದವನಿಗೆ ಹಾಸ್ಟೆಲ್​ನಲ್ಲಿ ಇರಬೇಕಾದದು ಜವಬ್ದಾರಿ, ಅದನ್ನು ಬಿಟ್ಟು ನಿಮ್ಮ ತಾಯಿ ಹಾಸ್ಟೆಲ್​ನ್ನು ನೋಡಿಕೊಳ್ಳುತ್ತಿದ್ದಾರೆ. ನೀವೇನು ಫ್ಯಾಮಿಲಿ ಬಿಸಿನೆಸ್​ ಮಾಡಿಕೊಂಡಿದ್ದೀರ, ಮತ್ತೊಮ್ಮೆ ನೀನಾಗಲಿ ಅಥವಾ ನಿಮ್ಮ ಮನೆಯವರಾಗಲಿ ಕಾಲಿಟ್ಟರೇ ಕಾಲು ಕತ್ತರಿಸಿ ಬಿಡ್ತೀನಿ ಎಂದು ಎಚ್ಚರಿಕೆ ನೀಡಿದ್ದಾರೆ. ಸಿಬ್ಬಂದಿಯನ್ನು ಬದಲಾಯಿಸುವಂತೆ ಶಾಸಕರು ಸೂಚನೆ ನೀಡಿದ್ದು, ಮಕ್ಕಳಿಗೆ ಚೆನ್ನಾಗಿ ನೋಡಿಕೊಳ್ಳುವಂತೆ ಸೂಚನೆ ನೀಡಿದ್ದಾರೆ. ಈ ರೀತಿಯ ತಪ್ಪು ಮರುಕಳಿಸುವುದಿಲ್ಲ ಎಂದು ದರ್ಶನ್​ ಪುಟ್ಟಣ್ಣಯ್ಯ (Darshan Puttanaiah) ಮಕ್ಕಳಿಗೆ ಭರವಸೆ ನೀಡಿದ್ದಾರೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net