VIDEO| ದಸರಾ ಸಂಗೀತ ಸಂಜೆಯಲ್ಲಿ ಶಾಸಕನಿಂದ ಡಾನ್ಸ್!

mla dance
Published on

ಮಂಡ್ಯ: ಶ್ರೀರಂಗಪಟ್ಟಣದ ಪಾರಂಪರಿಕ ದಸರಾ ಕಾರ್ಯಕ್ರಮದಲ್ಲಿ ಅಂಗವಾಗಿ ಬತೇರಿಯಲ್ಲಿ ಶುಕ್ರವಾರ ಸಂಜೆ ಆಯೋಜಿಸಿದ್ದ ಸಂಗೀತ ಸಂಜೆಯಲ್ಲಿ ಶಾಸಕ ರವೀಂದ್ರ ಶ್ರೀಕಂಠಯ್ಯ ನೃತ್ಯ ಮಾಡುವ ಮೂಲಕ ಸಾರ್ವಜನಿಕರನ್ನು ರಂಜಿಸಿದರು.

ಖ್ಯಾತ ಗಾಯಕ ರಘು ದೀಕ್ಷಿತ್ ನೇತೃತ್ವದಲ್ಲಿ ನಡೆಯುತ್ತಿದ್ದ ಗಾಯನ ಹಾಗೂ ನೃತ್ಯದ ವೇಳೆ ಶಾಸಕ ರವೀಂದ್ರ ಶ್ರೀಕಂಠಯ್ಯ ಕೂಡ ಸ್ಟೆಪ್ ಹಾಕಿದರು. ಇದನ್ನು ಕಂಡು ಸಾರ್ವಜನಿಕರು ಚಪ್ಪಾಳೆ, ಶಿಳ್ಳೆ ಮೂಲಕ ಹುರಿದುಂಬಿಸಿದರು. ಶಾಸಕರ ನೃತ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net