ಉತ್ತಮ ಅಂಕ ಗಳಿಸಿ ಕಾಲೇಜಿಗೆ ಕೀರ್ತಿ ತನ್ನಿ

hnl collage june 10
filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 45;
Published on

ಹೊನ್ನಾಳಿ: ಉತ್ತರ ಮತ್ತು ದಕ್ಷಿಣ ಕರ್ನಾಟಕವನ್ನು ಸಂರ್ಪಸುವ ಹಾಗೂ ನೂರು ವರ್ಷ ತುಂಬಿರುವ ಹಳೆ ಸೇತುವೆ ಹೊನ್ನಾಳಿಯಲ್ಲಿದೆ. ಈ ಸೇತುವೆಯನ್ನು ನೋಡಿ ಹೋಗಲು ಬ್ರಿಟಿಷರು ಇಲ್ಲಿಗೆ ಆಗಮಿಸಿದ ಇತಿಹಾಸವಿದೆ. ಅದಕ್ಕಾಗಿ ಹೊನ್ನಾಳಿ ಖ್ಯಾತಿ ಪಡೆದಿದೆ. ಇಲ್ಲಿರುವ ಸರ್ಕಾರಿ ಪದವಿ ಕಾಲೇಜಿನಲ್ಲಿ ಅಭ್ಯಾಸ ಮಾಡುತ್ತಿರುವ ನೀವು ಭಾಗ್ಯವಂತರು ಎಂದು ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ 2024-25 ನೇ ಸಾಲಿನ ಸಾಂಸ್ಕೃತಿಕ, ಕ್ರೀಡಾ, ಎನ್ನೆಸ್ಸೆಸ್ ಘಟಕ 12 ಯೋಜನೆ, ರೆಡ್ ಕ್ರಾಸ್ ಘಟಕ, ರೋವರ್ಸ್ ರೇಂಜರ್ಸ್ ಹಾಗೂ ಹೊನ್ನಕಿರಣ ವಾರ್ಷಿಕ ಸಂಚಿಕೆ ಬಿಡುಗಡೆ ಮತ್ತು ವಿವಿಧ ವೇದಿಕೆಗಳ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಕಳೆದ ಎರಡು ವರ್ಷಗಳ ಹಿಂದೆ ಕಾಲೇಜಿನ ವಾತಾವರಣ ಅಷ್ಟೊಂದು ಸರಿಯಾಗಿರಲಿಲ್ಲ. ಡಾ. ಧನಂಜಯ್ ಅವರು ಪ್ರಾಚಾರ್ಯರಾಗಿ ವರ್ಗಾವಣೆಯಾಗಿ ಬಂದಾಗ ಕಾಲೇಜಿನ ವಾತಾವರಣ ಈಗ ಸುಧಾರಿಸಿದೆ. ಅದಕ್ಕಾಗಿ ಅವರಿಗೆ ನಾವು ಧನ್ಯವಾದ ಅರ್ಪಿಸಬೇಕು ಎಂದರು.

ಉತ್ತಮವಾಗಿ ವಿದ್ಯಾಭ್ಯಾಸ ಮಾಡಿ, ಉತ್ತಮ ಅಂಕಗಳಿಸಿ ಪಾಲಕರಿಗೆ, ಕಾಲೇಜಿಗೆ ಹಾಗೂ ತಾಲೂಕಿಗೆ ಕೀರ್ತಿ ತನ್ನಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಈ ವೇಳೆ ಶಾಸಕರು ಬಾಯಿ ತಪ್ಪಿ, ನಾನು ಎರಡು ವರ್ಷಗಳಿಂದ ಮಂತ್ರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ ಎಂದಾಗ ಸುದ್ದಿಗಾರರು, ಮಂತ್ರಿಸ್ಥಾನದ ಬಗ್ಗೆ ಮಾತುಕತೆ ನಡೆದಿದೆಯಾ ಎಂದು ಶಾಸಕರನ್ನು ಪ್ರಶ್ನಿಸಿದರು. ಅದಕ್ಕೆ ಅವರು ಉತ್ತರಿಸಿ, ಮಂತ್ರಿ ಸ್ಥಾನ ಕೊಟ್ಟರೆ ನಿಭಾಯಿಸುತ್ತೇನೆ. ಆ ಸಾಮರ್ಥ್ಯ ನನಗಿದೆ ಎಂದು ಹೇಳಿಕೊಂಡರು.

ದಾವಣಗೆರೆ ವಿವಿ ಎನ್ನೆಸ್ಸೆಸ್ ಅಧಿಕಾರಿ ಡಾ. ಅಶೋಕ್​ಕುಮಾರ್ ಪಾಳೇದ್ ಮಾತನಾಡಿ, ಈ ಕಾಲೇಜು ದಾವಣಗೆರೆ ವಿಶ್ವವಿದ್ಯಾಲಯದಲ್ಲೇ ಶಿಸ್ತಿನ ಕಾಲೇಜು ಖ್ಯಾತಿ ಪಡೆದಿದೆ, ಇದಕ್ಕೆ ಪ್ರಾಚಾರ್ಯರು, ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಕಾರಣ ಎಂದರು.

ಸಿನಿಮಾ ನಾಯಕರನ್ನು ಅನುಕರಣೆ ಮಾಡದೆ, ಜ್ಞಾನ ಭಂಡಾರವನ್ನು ತುಂಬುವ ನಿಮ್ಮ ಅಧ್ಯಾಪಕರನ್ನು ಆದರ್ಶವಾಗಿಟ್ಟುಕೊಂಡು ವ್ಯಾಸಂಗ ಮಾಡಿದರೆ, ನೀವು ಸಮಾಜದಲ್ಲಿ ಉನ್ನತ ಸ್ಥಾನಕ್ಕೆ ಹೋಗುತ್ತಿರಿ ಎಂದು ತಿಳಿಸಿದರು.

ಪ್ರಾಚಾರ್ಯ ಡಾ.ಬಿ.ಜಿ. ಧನಂಜಯ್ ಮಾತನಾಡಿ, ಕಾಲೇಜಿನ ಶೈಕ್ಷಣಿಕ ಚಟುವಟಿಕೆಗಳಿಗೆ ಶಾಸಕರು ಹೆಚ್ಚು ಸಹಕಾರ ನೀಡುತ್ತಿದ್ದಾರೆ. ಖುದ್ದಾಗಿ ಅವರೇ ಕಾಲೇಜಿನ ಸ್ಥಿತಿಗತಿಗಳ ಬಗ್ಗೆ ವಿಚಾರಿಸುತ್ತಾರೆ, ಇವರು ಇಡೀ ರಾಜ್ಯಕ್ಕೆ ಮಾದರಿಯಾಗಿದ್ದಾರೆ ಎಂದರು.

ಪಿಎಸ್​ಐ ಕುಮಾರ್ ಮಾತನಾಡಿ, ವ್ಯಕ್ತಿ ಬದಲು ವ್ಯಕ್ತಿತ್ವವನ್ನು ಪೂಜೆ ಮಾಡಿ, ಆಗ ನಿಮ್ಮ ವ್ಯಕ್ತಿತ್ವಕ್ಕೆ ತೂಕ ಹೆಚ್ಚಾಗುತ್ತದೆ ಎಂದು ತಿಳಿಸಿದರು.

ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಬಿಎಸ್ಸಿಯಲ್ಲಿ ತೃತೀಯ ರ್ಯಾಂಕ್ ಪಡೆದ ಗಗನ ಹಾಗೂ ಪಿಎಸ್​ಡಿ ಪಡೆದ ಕಾಲೇಜಿನ ಗ್ರಂಥಪಾಲಕ ಡಾ. ನಾಗರಜ್​ನಾಯ್ಕ ಅವರನ್ನು ಶಾಸಕ ಡಿ.ಜಿ. ಶಾಂತನಗೌಡ ಸನ್ಮಾನಿಸಿದರು.

ಪ್ರಾಧ್ಯಾಪಕರಾದ ಹರಾಳು ಮಹಾಬಲೇಶ್ವರ್, ರಾಘವೇಂದ್ರರಾವ್,ಅಶೋಕ್, ಡಾ. ಬೀನಾ, ಪಿ. ಗೀತಾ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net