

ಸಕಲೇಶಪುರ: ತಾಲೂಕಿನ ದಬ್ಬಳ್ಳಿಕಟ್ಟೆಯಲ್ಲಿರುವ ಅರ್ಜುನ ಆನೆ ಸಮಾಧಿಗೆ ಶನಿವಾರ ಶಾಸಕ ಸಿಮೆಂಟ್ ಮಂಜು ಪುಷ್ಪನಮನ ಸಲ್ಲಿಸಿದರು.
ಬೆಳಗಾವಿ ಅಧಿವೇಶಕ್ಕೆ ತೆರಳಿದ್ದ ಹಿನ್ನೆಲೆಯಲ್ಲಿ ಅರ್ಜುನ ಆನೆಯ ಅಂತ್ಯ ಸಂಸ್ಕಾರಕ್ಕೆ ಆಗಮಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಶುಕ್ರವಾರ ರಾತ್ರಿ ಕ್ಷೇತ್ರಕ್ಕೆ ಆಗಮಿಸಿದ ಶಾಸಕರು ಶನಿವಾರ ಸಮಾಧಿ ಸ್ಥಳಕ್ಕೆ ಭೇಟಿ ನೀಡಿದ್ದರು.
ಸಮಾಧಿ ಮರು ನಿರ್ಮಾಣ: 11ನೇ ದಿನದ ಪುಣ್ಯಾರಾಧನೆಯ ರಾತ್ರಿ ಕಾಡಾನೆಗಳ ದಾಳಿಗೆ ಅರ್ಜುನ ಆನೆಯ ಸಮಾಧಿ ನೆಲಸಮಗೊಂಡಿತ್ತು. ಆದರೆ, ಯಸಳೂರು ಅರಣ್ಯ ಇಲಾಖೆ ನೆಲಸಮಗೊಂಡಿದ್ದ ಸಮಾಧಿಯನ್ನು ಮರುನಿರ್ಮಾಣ ಮಾಡಿ ಮತ್ತೆ ಪೂಜೆ ಸಲ್ಲಿಸಿದ್ದಾರೆ.