

ನರಗುಂದ: ಮಕ್ಕಳಿಗೆ ಉತ್ತಮ ಶಿಕ್ಷಣ ದೊರಕಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ತಮ್ಮದಾಗಬೇಕು. ಮಕ್ಕಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಅನೇಕ ಯೋಜನೆಗಳನ್ನು ಜಾರಿ ತಂದಿವೆ. ಇದರ ಪ್ರಯೋಜನ ಮಕ್ಕಳಿಗೆ ದೊರಕಿಸುವಂತೆ ನೋಡಿಕೊಳ್ಳಿ ಎಂದು ಶಾಸಕ ಸಿ.ಸಿ. ಪಾಟೀಲ ಶಿಕ್ಷಕರಿಗೆ ಕಿವಿ ಮಾತು ಹೇಳಿದರು.
ಪಟ್ಟಣದ ಬಾಲಕಿಯರ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಮೊಟ್ಟೆ ವಿತರಣೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಈ ಪ್ರೌಢಶಾಲೆ ಪ್ರಗತಿಗಾಗಿ ಅನೇಕ ಕಾರ್ಯಕ್ರಮಗಳನ್ನು ಬಿಜೆಪಿ ಸರ್ಕಾರವಿದ್ದ ಸಂದರ್ಭದಲ್ಲಿ ಮಾಡಲಾಗಿದೆ. ಮಕ್ಕಳು ಉತ್ತಮ ರೀತಿಯಲ್ಲಿ ಅಧ್ಯಯನ ಮಾಡಿ ಜೀವನದಲ್ಲಿ ಉತ್ತಮ ಭವಿಷ್ಯ ನಿರ್ವಿುಸಿಕೊಳ್ಳಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಶಿಕ್ಷಕರು ಮನವಿ ನೀಡಿ, ಈ ಹಿಂದೆ ಬಿಜೆಪಿ ಸರ್ಕಾರವಿದ್ದ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆಯಿಂದ 16.24 ಲಕ್ಷ ರೂ. ಗಳಲ್ಲಿ ಶಾಲಾ ಕಟ್ಟದ ನಿರ್ವಣವಾಗಿದೆ. ಹೆಚ್ಚಿನ ಪ್ರಗತಿಗಾಗಿ ಅನುದಾನ ಒದಗಿಸಬೇಕೆಂದು ಕೋರಿದರು. ಇದನ್ನು ರ್ಚಚಿಸಿ ಮತ್ತು ಹೆಚ್ಚಿನ ಸಹಾಯ, ಸಹಕಾರ ನೀಡುವುದಾಗಿ ಶಿಕ್ಷಕರಿಗೆ ಶಾಸಕ ಪಾಟೀಲ ಭರವಸೆ ನೀಡಿದರು.
ಶಾಲಾ ಮುಖ್ಯೋಪಾಧ್ಯಾಯ ಎಸ್.ಎಸ್. ಹಿರೇಮಠ, ಎಂ.ಎಸ್. ಅಸುಂಡಿ, ಸಂತೋಷ ಹಂಚಿನಾಳ, ಪುರಸಭೆ ಉಪಾಧ್ಯಕ್ಷೆ ಕಾಶವ್ವ ಮಳಗಿ, ಬಸವರಾಜ ಮಳಗಿ, ಬಿಇಒ ಡಾ. ಗುರುನಾಥ ಹೂಗಾರ, ಶಿವಾನಂದ ಮುತವಾಡ, ಆರ್.ಕೆ. ಅಲ್ಲಿಬಾಯಿ, ಎಸ್.ಬಿ. ಹಿರೇಮಠ, ಗಿರೀಶ ದಾಸರ, ಆರ್.ಎಸ್. ಕುರಹಟ್ಟಿ, ಬಿ.ಎ. ವಗ್ಗರ, ಶಾಲಾ ದೈಹಿಕ ಪರಿವೀಕ್ಷಕ ಎನ್.ಆರ್. ನಿಡಗುಂದಿ, ಎಂ.ಆರ್. ನಾಯ್ಕರ್, ರಾಕೇಶ ಮಡಿವಾಳರ, ವಿ.ಎಲ್. ಹಿರೇಕೆರೂರ, ಸಿ.ಎಂ. ಕೊಳ್ಳಿಯವರ. ಬಸವರಾಜ ನೆಗಳೂರ, ಎ.ಜಿ. ಗೌಡರ, ಎನ್.ಎಂ. ಬಾರ್ಖಿ ಇನ್ನಿತರರು ಇದ್ದರು.