ಸ್ವಚ್ಛ, ವ್ಯಸನಮುಕ್ತ ಬೈಂದೂರಿಗೆ ಶಾಸಕ ಕರೆ

Published on

ಬೈಂದೂರು: ಈ ಬಾರಿಯ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಬೈಂದೂರು ಕ್ಷೇತ್ರದಾದ್ಯಂತ ಸ್ವಚ್ಛತೆ ಹಾಗೂ ವ್ಯಸನಮುಕ್ತ ಪರಿಕಲ್ಪನೆಯಡಿ ಆಚರಿಸಲು ಈಗಾಗಲೇ ಸಂಕಲ್ಪಿಸಿದ್ದು, ಅದರಂತೆ ಬೈಂದೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಈ ಸಂಬಂಧ ಆ.15ರ ವರೆಗೆ ಕಾರ್ಯಕ್ರಮಗಳು ನಡೆಯಲಿವೆ.

ವಿವಿಧ ಕಡೆಗಳಲ್ಲಿ ಸ್ವಚ್ಛತೆ ಹಾಗೂ ವ್ಯಸನಮುಕ್ತ ಗ್ರಾಮ ನಿರ್ವಾಣದ ಕುರಿತು ಜನಜಾಗೃತಿ ಮೂಡಿಸಲಾಗುತ್ತಿದೆ. ವಿಶೇಷವಾಗಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಅನೈರ್ಮಲ್ಯ ಹಾಗೂ ಕೆಟ್ಟ ವ್ಯಸನಗಳ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಲಾಗುತ್ತಿದೆ. ಸ್ವಚ್ಛ ಹಾಗೂ ವ್ಯಸನಮುಕ್ತ ಬೈಂದೂರು ನಿರ್ವಾಣಕ್ಕೆ ಎಲ್ಲ ನಾಗರಿಕರು ಸಂ ಸಂಸ್ಥೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಜತೆ ಕೈಜೋಡಿಸಬೇಕೆಂದು ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಕರೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net