

ಮಂಡ್ಯ: ನನ್ನ ರಾಜಕೀಯ ಜೀವನದಲ್ಲಿ ಇಂತಹ ಬೇಜವಾಬ್ದಾರಿ ಸರ್ಕಾರ ಹಾಗೂ ಸಚಿವರನ್ನು ನಾನು ನೋಡಿರಲಿಲ್ಲ. ಒಂದು ವರ್ಷವಾದರೂ ಉಸ್ತುವಾರಿ ಸಚಿವ ಗೋಪಾಲಯ್ಯ ಕಚೇರಿ ತೆರೆದಿಲ್ಲ ಎಂದು ಮೇಲುಕೋಟೆ ಶಾಸಕ ಸಿ.ಎಸ್.ಪುಟ್ಟರಾಜು ವಾಗ್ದಾಳಿ ನಡೆಸಿದರು.
ತಾಲೂಕಿನ ದುದ್ದ ಹೋಬಳಿಯ ಚಂದಗಾಲು ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ಚಂದಗಾಲು-ತಂಡಸನಹಳ್ಳಿ ವಾರ್ಗವಾಗಿ 3 ಕೋಟಿ ರೂ. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಬುಧವಾರ ಚಾಲನೆ ನೀಡಿ ವಾತನಾಡಿದರು.
ಈ ಸರ್ಕಾರದಲ್ಲಿ ಅಭಿವೃದ್ಧಿ ವಿಚಾರ ಇಲ್ಲವೇ ಇಲ್ಲ. ಕೆ.ಸಿ.ನಾರಾಯಣಗೌಡ ಪ್ರತಿನಿಧಿಸುವ ಕೆ.ಆರ್.ಪೇಟೆ ಹೊರತುಪಡಿಸಿ ಉಳಿದ ಕ್ಷೇತ್ರಗಳು ಗೋಪಾಲಯ್ಯ ಅವರಿಗೆ ಕಾಣುವುದಿಲ್ಲ ಎಂದು ಅಸವಾಧಾನ ವ್ಯಕ್ತಪಡಿಸಿದರು.
ನರೇಗಾ ಯೋಜನೆಯಲ್ಲಿ ಮಂಡ್ಯ ಜಿಲ್ಲೆ ಕಡೇ ಸ್ಥಾನದಲ್ಲಿದ್ದು, ಸಂಸದೆ ಸುಮಲತಾ ಅವರು ದಿಶಾ ಸಭೆ ವಾಡುವುದರಿಂದ ಅಭಿವೃದ್ಧಿ ಕೆಲಸ ಆಗಲ್ಲ. ನರೇಗಾ ಯೋಜನೆಯಡಿ ಒಂದೊಂದು ಪಂಚಾಯಿತಿಯಲ್ಲಿ 10 ಕೋಟಿ ರೂ. ಕೆಲಸ ವಾಡುವಂತಹ ಅವಕಾಶ ಇದೆ. ನಾನೂ ಸಹ ನಾಲ್ಕು ವರ್ಷ ಸಂಸದನಾಗಿದ್ದೆ. ಕೇಂದ್ರ ಸರ್ಕಾರದಿಂದ ಹಣ ತಂದು ಯಾವ ರೀತಿ ಕೆಲಸ ವಾಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದೇನೆ. ಅದನ್ನು ಅನುಸರಿಸಿ ಸಂಸದೆ ಕೆಲಸ ವಾಡಲಿ. ಜೆಡಿಎಸ್ ಶಾಸಕರನ್ನು ನಿಂದಿಸುವುದನ್ನು ಬಿಟ್ಟು ಬೇರೆ ಯಾವುದೇ ಅಭಿವೃದ್ಧಿ ಕೆಲಸ ವಾಡುತ್ತಿಲ್ಲ ಎಂದು ದೂರಿದರು.
ವಾಜಿ ಸಂಸದ ಎಲ್.ಆರ್.ಶಿವರಾಮೇಗೌಡರು ಮಂಡ್ಯ ಜಿಲ್ಲೆ ಜೆಡಿಎಸ್ ಭದ್ರಕೋಟೋ ಛಿದ್ರವಾಗಲಿದೆ ಎಂದು ಹೇಳಿದ್ದಾರೆ. ಇದನ್ನು ಶಿವರಾಮೇಗೌಡ ಹೇಳುವುದರಿಂದ ಅದು ಸಾಬೀತಾಗುವುದಿಲ್ಲ. ಜಿಲ್ಲೆಯ ಜನತೆ ಕಳೆದ ಬಾರಿ ಏಳಕ್ಕೆ ಏಳೂ ಜೆಡಿಎಸ್ ಶಾಸಕರನ್ನು ಗೆಲ್ಲಿಸಿಕೊಟ್ಟಿದ್ದರು. ಅದೇ ರೀತಿ ಮತ್ತೊಮ್ಮೆ ಜನ ಆಶೀರ್ವಾದ ವಾಡಲಿದ್ದಾರೆ. ಅದು ಜನರ ತೀರ್ವಾನ. ಶಿವರಾಮೇಗೌಡ ಹೇಳುವುದರಿಂದ ತೀರ್ವಾನವಾಗುವುದಿಲ್ಲ ಎಂದು ಅವರಿಗೆ ತಿರುಗೇಟು ನೀಡಿದರು.
ಮಳೆಯಿಂದಾಗಿ ಸಾಕಷ್ಟು ಹಾನಿಯುಂಟಾಗಿತ್ತು. ವಾರಚಾಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾಕಷ್ಟು ಸಮಸ್ಯೆಗಳಿತ್ತು. ಅದನ್ನು ಪಟ್ಟಿ ವಾಡಿ ಎಲ್ಲವನ್ನೂ ಸರಿಪಡಿಸುವ ಕಾರ್ಯ ವಾಡುತ್ತಿದ್ದೇವೆ. ಹಂತ ಹಂತವಾಗಿ ಅಭಿವೃದ್ಧಿ ಕಾರ್ಯ ವಾಡುತ್ತೇನೆ. ಜನರ ಸಮಸ್ಯೆಗೆ ತಕ್ಷಣವೇ ಸ್ಪಂದಿಸಿ ಕೆಲಸ ವಾಡುತ್ತೇನೆ. ಈಗಾಗಲೇ ವಡ್ಡರಹಳ್ಳಿಕೊಪ್ಪಲು, ಕುರಿಕೊಪ್ಪಲು ಗ್ರಾಮದ ಅಭಿವೃದ್ಧಿಗೂ ಚಾಲನೆ ನೀಡಿದ್ದೇನೆ ಎಂದು ಹೇಳಿದರು.
ಜೆಡಿಎಸ್ ಮುಖಂಡರಾದ ಚಂದಗಾಲು ಶ್ರೀಧರ್, ವಿಜಯಕುವಾರ್, ತಮ್ಮಣ್ಣ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪವಿತ್ರಾ ಶಿವಕುವಾರ್, ಸದಸ್ಯರಾದ ನಿರಂಜನ್, ಸಿದ್ದರಾಜು, ಸಂತೋಷ್, ಇಂಜಿನಿಯರ್ ಲೋಕೇಶ್, ಜಗದೀಶ್, ಗುತ್ತಿಗೆದಾರ ರಾವೇಂದ್ರ ಇತರರಿದ್ದರು.