

ನಿಡಗುಂದಿ: ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಮಾದಿಗ ಸಮುದಾಯದ ಒಳಮೀಸಲು ಜಾರಿಗೊಳಿಸಬೇಕು. ಈ ಬಗ್ಗೆ ಶಾಸಕ ಸಿ.ಎಸ್ ನಾಡಗೌಡರು ಸಿಎಂ ಸಿದ್ದರಾಮಯ್ಯ ಮೇಲೆ ಒತ್ತಡ ತರಬೇಕು ಎಂದು ದಲಿತ ಮುಖಂಡ ಬಸವರಾಜ ಸಿದ್ಧಾಪುರ ಹೇಳಿದರು.
ಮುದ್ದೇಬಿಹಾಳ ತಾಲೂಕು ಮಾದಿಗ ಒಳಮೀಸಲಾತಿ ಹೋರಾಟ ಸಮಿತಿ ಹಾಗೂ ವಿವಿಧ ದಲಿತಪರ ಸಂಘಟನೆಗಳ ಒಕ್ಕೂಟ ಕೂಡಲಸಂಗಮದಿಂದ ಮುದ್ದೇಬಿಹಾಳವರೆಗೆ ಹಮ್ಮಿಕೊಂಡ ಪಾದಯಾತ್ರೆ ಶನಿವಾರ ನಿಡಗುಂದಿಗೆ ಆಗಮಿಸಿ ಇಲ್ಲಿನ ಭೀಮಾಶಂಕರ ಮಠದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.
ವಿಧಾನಸಭೆ ಚುನಾವಣೆಯಲ್ಲಿ ಮತ ಕೇಳಲು ಆಗಮಿಸಿದ್ದ ಶಾಸಕ ಸಿ.ಎಸ್ ನಾಡಗೌಡರು, ದಲಿತರ ಒಳಮೀಸಲು ಬಗ್ಗೆ ಸದನದಲ್ಲಿ ಧ್ವನಿ ಎತ್ತಿ ಮಾತನಾಡುತ್ತೇನೆ ಎಂದು ಭರವಸೆ ನೀಡಿದ್ದರು. ಆದರೆ, ಶಾಸಕರು ಒಂದೂ ಬಾರಿಯೂ ಸದನದಲ್ಲಿ ಮಾತನಾಡಿಲ್ಲ. ಇದರಿಂದ ದಲಿತರಿಗೆ ಕೊಟ್ಟ ಮಾತು ತಪ್ಪಿದ್ದಾರೆ. ಪಾದಯಾತ್ರೆ ನ.25 ರಂದು ಸೋಮವಾರ ಮುದ್ದೇಬಿಹಾಳ ತಲುಪಲಿದ್ದು, ಅಂದು ತಹಸೀಲ್ದಾರ್ ಕಚೇರಿ ಆವರಣದಲ್ಲಿ ಸಭೆ ನಡೆಸಿ ನಂತರ ಶಾಸಕ ಸಿ.ಎಸ್ ನಾಡಗೌಡರ ಮನೆಗೆ ಮುತ್ತಿಗೆ ಹಾಕಲಾಗುವುದು ಎಂದರು.
ಮುಖಂಡರಾದ ಪ್ರಲ್ಹಾದ ಕರಿಯಣ್ಣವರ, ವಸಂತ ಹೊಳೆಯಣ್ಣವರ, ರಾಜು ಚಳ್ಳಮರದ ಮಾತನಾಡಿ, ಸುಪ್ರೀಂಕೋರ್ಟ್ ತೀರ್ಪನ್ನು ಸಿಎಂ ಸಿದ್ದರಾಮಯ್ಯ ಸ್ವಾಗತಿಸಿದ್ದಾರೆ. ತೀರ್ಪು ನೀಡಿ ಎರಡು ತಿಂಗಳು ಗತಿಸಿದರೂ ಅದನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಕ್ರಮ ವಹಿಸದಿರುವುದು ವಿಷಾದನೀಯ ಎಂದರು. ದಲಿತ ಮುಖಂಡ ಶೇಖಪ್ಪ ಮಾದರ ಮಾತನಾಡಿದರು.
ಶೇಖರ ಆಲೂರ, ಭೀಮರಾಯ ಹುಲ್ಲೂರ, ಆನಂದ ಮುದೂರ, ಜಗದೀಶ ಸರೂರ, ದುರುಗಪ್ಪ ಗರಸಂಗಿ, ಸಂಗಮೇಶ ಸರೂರ, ಪರಶು ಸಿದ್ದಾಪೂರ, ರವಿ ಗರಸಂಗಿ, ಸುರೇಶ ಜಲಪೂರ, ಸುರೇಶ ಹೊಸಮನಿ, ದುರುಗಪ್ಪ ಗುಡದಪ್ಪಗೋಳ, ಶೇಖರ ಬಿದ್ನಾಳ, ಪ್ರೇಮಾನಂದ ಕರಿಯಣ್ಣವರ, ಹನುಮಂತ ಬಿಳೇಬಾವಿ, ಪ.ಪಂ.ಸದಸ್ಯ ಹನುಮಂತ ಗುಂಡಿನಮನಿ, ಶ್ರೀನಾಥ ಬೈರವಾಡಗಿ, ಚಂದ್ರು ಗುಂಡಿನಮನಿ, ಶಂಕರ ಗುಂಡಿನಮನಿ, ಯಮನೂರಿ ಬೂದಿಹಾಳ, ಕೃಷ್ಣಾ ಆದವಾನಿ, ಲಕ್ಷ್ಮಣ ಅಮೀನಪ್ಪಗೋಳ, ಮಲ್ಲು ವಡವಡಗಿ ಇತರರಿದ್ದರು.