ಧನ-ಧಾನ್ಯ ಕೃಷಿ ಯೋಜನೆಗೆ ಗದಗ ಆಯ್ಕೆ

12 NRD-3.
Published on

ನರಗುಂದ: ದೇಶಾದ್ಯಂತ ಕೃಷಿ ಕಾರ್ಯಕ್ಷಮತೆಯಲ್ಲಿ ಹಿಂದುಳಿದ ದೇಶದ 100 ಜಿಲ್ಲೆ ಕೇಂದ್ರ ಸರ್ಕಾರ ಗುರಿಯಾಗಿಸಿಕೊಂಡು ಧನ-ಧಾನ್ಯ ಕೃಷಿ ಯೋಜನೆ ಜಾರಿಗೆ ತಂದಿದೆ. ರಾಜ್ಯದ ಆರು ಜಿಲ್ಲೆಗಳ ಪೈಕಿ ಗದಗ ಜಿಲ್ಲೆಯೂ ಒಂದಾಗಿದೆ ಎಂದು ಶಾಸಕ ಸಿ.ಸಿ.ಪಾಟೀಲ ಮಾಹಿತಿ ನೀಡಿದರು.

ನರಗುಂದದ ಕೃಷಿ ಇಲಾಖೆಯಲ್ಲಿ ನಡೆದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಧನ-ಧಾನ್ಯ ಕೃಷಿ ಯೋಜನೆ ವರ್ಚುವಲ್ ಕಾರ್ಯಕ್ರಮ ವೀಕ್ಷಿಸಿ ಅವರು ಮಾತನಾಡಿ, ಕಡಿಮೆ ಇಳುವರಿ ಮತ್ತು ಸಾಲದ ಮಿತಿ ಲಭ್ಯತೆ ಮಾನದಂಡ ಗುರಿಯಾಗಿಸಿಕೊಂಡು ಗದಗ ಜಿಲ್ಲೆ ಧನ-ಧಾನ್ಯ ಕೃಷಿ ಯೋಜನೆ ಆಯ್ಕೆಗೊಂಡಿದೆ. ಕೃಷಿ ಸರಪಳಿ ಬಲಪಡಿಸುವುದು ಈ ಯೋಜನೆ ಮೂಲ ಉದ್ದೇಶ. ಹನಿ ನೀರಾವರಿ ಮತ್ತು ತುಂತುರು ನೀರಾವರಿ ಪದ್ಧತಿ ಅಳವಡಿಸಲು ಹೆಚ್ಚಿನ ಸಬ್ಸಿಡಿ, ಸಣ್ಣ ನೀರಾವರಿ ಸೌಲಭ್ಯಗಳ ಸುಧಾರಣೆ ಮತ್ತು ನೀರಿನ ಸಂಗ್ರಹ ಸಾಮರ್ಥ್ಯ ಹೆಚ್ಚಿಸುವುದು ಸೇರಿದಂತೆ ಅನೇಕ ಸೌಕರ್ಯಗಳು ಈ ಯೋಜನೆಯಡಿ ದೊರೆಯಲಿವೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಂ.ಎಸ್. ಕುಲಕರ್ಣಿ, ಮಹೇಶ ಮಾಲಿನಮನಿ, ಶಿವಾಜಿ ಸಾಠೆ, ಪ್ರಕಾಶ ಒಡ್ಡಿನ, ಭೀಮಪ್ಪ ಯಾವಗಲ್, ರಾಜುಗೌಡ ಪಾಟೀಲ, ಯಲ್ಲಪ್ಪಗೌಡ ಬನಹಟ್ಟಿ, ಬಾಳನಗೌಡ ಪರ್ವತಗೌಡ್ರ, ಬಿ.ಜಿ. ಸುಂಕದ, ಮರಿಯಪ್ಪ ದಳವಾಯಿ, ಶೇಖಪ್ಪ ಸುಂಕದ, ಬಸವರಾಜ ಹುಡೇದ, ನಾಗರಾಜ ನೆಗಳೂರ, ಸಂತೋಷ ಹಂಚಿನಾಳ, ಸಿದ್ದೇಶ ಹೂಗಾರ, ವಿಠಲ ಹವಾಲ್ದಾರ ಇನ್ನಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net