ಶಾಸಕರ ಸಹೋದರಿನಿಗೆ ಕರೊನಾ ಪಾಸಿಟಿವ್, 10 ದಿನಗಳ ಕಾಲ ವೆಂಕಟರಾವ್ ನಾಡಗೌಡ ಹೋಂಕ್ವಾರಂಟೈನ್‌ಗೆ ನಿರ್ಧಾರ

corona symptom
Published on

ಸಿಂಧನೂರು: ನನ್ನ ಸಹೋದರನಿಗೆ ಕರೊನಾ ಪಾಸಿಟಿವ್ ದೃಢವಾದ ಈ ಹಿನ್ನೆಲೆಯಲ್ಲಿ ಸ್ವಯಂ ಪ್ರೇರಿತವಾಗಿ ಹೋಂಕ್ವಾರಂಟೈನ್ ಆಗುತ್ತಿದ್ದು, ಕ್ಷೇತ್ರದ ಜನತೆ 10 ದಿನಗಳವರೆಗೆ ಸಂಪರ್ಕಕ್ಕೆ ಬರಬೇಡಿ ಎಂದು ಶಾಸಕ ವೆಂಕಟರಾವ ನಾಡಗೌಡ ತಿಳಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿದ ಅವರು, ಈಗಾಗಲೇ ನನ್ನ ಸಹೋದರನಿಗೆ ಕರೊನಾ ದೃಢವಾಗಿದ್ದರಿಂದ ಸಂಪರ್ಕಿತರು ಪರೀಕ್ಷೆಗೆ ಒಳಗಾಗುವಂತೆ ಮನವಿ ಮಾಡಲಾಗಿದೆ. ನಾನು ಸ್ವಯಂ ಪ್ರೇರಿತನಾಗಿ ಹೋಂಕ್ವಾರಂಟೈನ್‌ಗೆ ಒಳಗಾಗುವುದರಿಂದ ಕ್ಷೇತ್ರದ ಜನತೆ 10 ದಿನಗಳವರೆಗೆ ನೇರವಾಗಿ ಭೇಟಿ ಮಾಡಲು ಬರಬೇಡಿ, ತುರ್ತು ಸಮಸ್ಯೆ ಇದ್ದರೆ ದೂರವಾಣಿಯಲ್ಲಿ ಸಂಪರ್ಕಿಸಿದರೆ ಪರಿಹಾರ ಕೊಡಿಸುತ್ತೇನೆಂದು ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net