ಜನರ ಸಮಸ್ಯೆಗೆ ಸ್ಪಂದಿಸುತ್ತಿರುವ ರಾಜ್ಯಸರ್ಕಾರ: ಶಾಸಕ ರವಿಕುಮಾರ್ ಗಣಿಗ ಹೇಳಿಕೆ

MLA Bhumi Pooja for development work Mandya
Published on

ಮಂಡ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಜನರ ಸಮಸ್ಯೆಗೆ ಸ್ಪಂದಿಸುತ್ತಿದೆ ಎಂದು ಶಾಸಕ ರವಿಕುಮಾರ್ ಗಣಿಗ ತಿಳಿಸಿದರು.

ತಾಲೂಕಿನ ಮುದ್ದಂಗೆರೆ ಗ್ರಾಮದ ಹೆಬ್ಬಳ ಸಮೀಪವಿರುವ ಮುತ್ತುರಾಯಸ್ವಾಮಿ ದೇವಾಲಯದಲ್ಲಿ ಕಾವೇರಿ ನೀರಾವರಿ ನಿಗಮದಿಂದ ಆಯೋಜಿಸಿದ್ದ ಅಭಿವೃದ್ದಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಮುದ್ದಂಗೆರೆ ಗ್ರಾಮದಲ್ಲಿ ಅಂದಾಜು 5 ಕೋಟಿ ರೂ ವೆಚ್ಚದಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗೆ ಮಾಡಲಾಗುತ್ತಿದೆ. ಮುದ್ದಂಗೆರೆ ಹೆಬ್ಬಳದ ಮುತ್ತುರಾಯಸ್ವಾಮಿ ದೇವಾಲಯದ ಹತ್ತಿರ ತಡೆಗೋಡೆ ನಿರ್ಮಾಣ, ಕಚ್ಚಿಗೆರೆ ಕೆರೆಯ ಸೇತುವೆ ಪುನರ್ ನಿರ್ಮಾಣ ಮತ್ತು ಬಿ.ಗೌಡಗೆರೆ ಕೆರೆ ಕೋಡಿ ಅಭಿವೃದ್ದಿ ಕಾಮಗಾರಿ ನಡೆಯುತ್ತಿದೆ. ಗ್ರಾಮಕ್ಕೆ 5 ಕೋಟಿ ರೂ ವೆಚ್ಚದ ಯೋಜನೆ ಬಂದಿರುವುದೇ ಇತಿಹಾಸ ಎಂದರು.

ಕಳೆದ 2ವರ್ಷದಿಂದ ಹೆಚ್ಚು ಮಳೆ ನೀರಿನಿಂದ ಮುತ್ತುರಾಯಸ್ವಾಮಿ ದೇವಸ್ಥಾನ ಮುಳುಗಡೆಯಾಗತ್ತದೆ, ತಡೆಗೋಡೆ ನಿರ್ಮಾಣಕ್ಕೆ ಗ್ರಾಮಸ್ಥರು ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸಮಸ್ಯೆ ಶಾಶ್ವತ ಪರಿಹಾರ ಕೊಡುವ ನಿಟ್ಟನಲ್ಲಿ ಕಾಮಗಾರಿ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಗ್ರಾಮಗಳ ರಸ್ತೆ, ಚರಂಡಿ ಅಭಿವೃದ್ದಿ ಮಾಡುತ್ತೇವೆ. ಹಗಲು ರಾತ್ರಿಯಾಗುವುದರೊಳಗೆ ಎಲ್ಲವನ್ನೂ ಮಾಡಲು ಸಾಧ್ಯವಿಲ್ಲ. ಇನ್ನೂ 3 ವರ್ಷ ಅಧಿಕಾರದಲ್ಲಿರುತ್ತೇವೆ. ಈ ಭಾಗದ ವಿವಿಧ ಗ್ರಾಮಗಳ ಅಭಿವೃದ್ದಿಗೆ 25 ಕೋಟಿ ರೂ ಹಾಕಿದ್ದು, ಟೆಂಡರ್ ಪ್ರಕ್ರಿಯೆ ಮುಗಿದಿದೆ. ಶೀಘ್ರವೇ ಕಾಮಗಾರಿ ಪ್ರಾರಂಭವಾಗಲಿದೆ ಎಂದರು.

ಮುಖಂಡರಾದ ನಾರಾಯಣಪ್ಪ, ರಾಮು, ಆಲಕೆರೆ ಕೃಷ್ಣೇಗೌಡ, ಆನಂದ್, ಆಲಕೆರೆ ಮಹದೇವ, ಕೃಷ್ಣಪ್ಪ, ನಾರಾಯಣಸ್ವಾಮಿ, ರೈತಸಂಘದ ಜಗದೀಶ್, ಹರೀಶ್, ರವಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net